ಮತ್ತೊಂದು ಸಾಧನೆ ಮಾಡಿದ ಇಸ್ರೋ: ಸ್ಪೇಡೆಕ್ಸ್​ ಉಪಗ್ರಹಗಳ ಅನ್ ​-ಡಾಕಿಂಗ್​ ಪ್ರೊಸೆಸ್‌ ಸಕ್ಸಸ್‌

ಬಾಹ್ಯಾಕಾಶ ಸಂಸ್ಥೆ ಇಸ್ರೋ ಇದೀಗ ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದೆ. ಬಾಹ್ಯಾಕಾಶದಲ್ಲಿ ಉಪಗ್ರಹಗಳ ಅನ್​ಡಾಕಿಂಗ್​ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಮೂಲಕ, ಮಹತ್ವಾಕಾಂಕ್ಷೆಯ ಸ್ಪೇಡೆಕ್ಸ್ ಉಪಗ್ರಹಗಳ​ ಉಡಾವಣೆ ಯಶಸ್ವಿಯಾಗಿದೆ.

ಈ ಸಾಧನೆಯು ಚಂದ್ರನ ಅನ್ವೇಷಣೆ, ಮಾನವ ಬಾಹ್ಯಾಕಾಶ ಹಾರಾಟ, ಮತ್ತು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸುವಂತಹ ಭಾರತದ ಬಾಹ್ಯಾಕಾಶ ಸಂಸ್ಥೆಯ ಭವಿಷ್ಯದ ಕಾರ್ಯಾಚರಣೆಗಳಿಗೆ ಮಹತ್ವದ ಹೆಜ್ಜೆಯಾಗಲಿದೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್​ ಅವರು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಹಂಚಿಕೊಳ್ಳುವ ಮೂಲಕ ಇಸ್ರೋ ತಂಡವನ್ನು ಅಭಿನಂದಿಸಿದ್ದಾರೆ. ತಂಡದ ಸಾಧನೆಯ ಬಗ್ಗೆ ಅಭಿಮಾನ ಕೂಡಾ ವ್ಯಕ್ತಪಡಿಸಿದ್ದಾರೆ.

“SpaDex ಉಪಗ್ರಹಗಳ ಡಿ-ಡಾಕಿಂಗ್​ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ನಂಬಲಸಾಧ್ಯವಾದ ಸಾಧನೆ, ಭಾರತೀಯ ಅಂತರಿಕ್ಷ ನಿಲ್ದಾಣ, ಚಂದ್ರಯಾನ 4 ಮತ್ತು ಗಗನಯಾನ ಸೇರಿದಂತೆ ಮಹತ್ವಾಕಾಂಕ್ಷೆಯ ಭವಿಷ್ಯದ ಕಾರ್ಯಾಚರಣೆಗಳ ಸುಗಮ ನಿರ್ವಹಣೆಗೆ ದಾರಿ ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಡಿಸೆಂಬರ್ 30, 2024 ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ಪಾಡೆಕ್ಸ್ (ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್) ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಕೆಳಹಂತದ ಭೂಮಿಯ ಕಕ್ಷೆಯಲ್ಲಿ ಡಾಕಿಂಗ್ ಮತ್ತು ಅನ್‌ಡಾಕಿಂಗ್ ಕುಶಲತೆಯನ್ನು ನಿರ್ವಹಿಸುವಂತಹ SDX-1 ಮತ್ತು SDX-2 ಅಥವಾ “ಚೇಸರ್” ಮತ್ತು “ಗುರಿ” ಎಂದು ಕರೆಯಲ್ಪಡುವ ಎರಡು ಉಪಗ್ರಹಗಳನ್ನು ಒಳಗೊಂಡಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!