ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಇಸ್ರೋ ಅಧ್ಯಕ್ಷ ಸೋಮನಾಥ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರು ಉದರದ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ.

ಅನುವಂಶಿಕವಾಗಿ ಸಮಸ್ಯೆ ಬಾಧಿಸಿದ್ದು, ಸದ್ಯ ಕೀಮೋಥೆರಪಿ ತೆಗೆದುಕೊಳ್ಳುತ್ತಿದ್ದಾರೆ.

ಹಲವು ದಿನಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಸೋಮನಾಥ್ ಅವರು ಆದಿತ್ಯ ಎಲ್ ೧ ಉಡಾವಣೆ ದಿನ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿದ್ದರು. ಅಂದು ಅವರಿಗೆ ಕ್ಯಾನ್ಸರ್ ವಿಷಯ ತಿಳಿದಿತ್ತು.

ಇದೊಂದು ಸುದೀರ್ಘ ಪಯಣ, ಮಾತ್ರೆ ಕುಡಿದರೆ ವಾಸಿಯಾಗುವ ಸಮಸ್ಯೆ ಅಲ್ಲ. ಆದರೆ ನಾನು ಯುದ್ಧದಲ್ಲಿ ಹೋರಾಡುತ್ತೇನೆ. ನಾಲ್ಕು ದಿನ ಮಾತ್ರ ಆಸ್ಪತ್ರೆಯಲ್ಲಿದ್ದೆ. ಇದೀಗ ಮತ್ತೆ ಕೆಲಸ ಆರಂಭಿಸಿದ್ದೇನೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!