ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಯಾಗರಾಜ್‌ನಲ್ಲಿ ಮಹಾಕುಂಭಮೇಳಕ್ಕೆ ಬೇರೆ ಬೇರೆ ಧರ್ಮದವರು, ಭಾರತೀಯರಷ್ಟೇ ಅಲ್ಲದೇ ವಿದೇಶಿಯರೂ ಕೂಡ ಬಂದು, ಗಂಗಾ, ಯಮುನಾ ಹಾಗೂ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿ, ದೈವೀಕ ಅನುಭವ ಪಡೆಯುತ್ತಿದ್ದಾರೆ.
ಇದರ ಜೊತೆಗೆ ಒಂದೆಡೆ ಖರ್ಗೆ, ಮಮತಾ ಬ್ಯಾನರ್ಜಿ ಸೇರಿದಂತೆ I.N.D.I.A. ಬಣದ ನಾಯಕರು ಕುಂಭಮೇಳದ ಬಗ್ಗೆ ಅಪಸ್ವರ ನುಡಿಯುತ್ತಿದ್ದಾರೆ. ಮತ್ತೊಂದೆಡೆ ದೇಶ ವಿದೇಶಗಳ ಖ್ಯಾತ ಉದ್ಯಮಿಗಳು, ರಾಜಕಾರಣಿಗಳು, ಕಲಾವಿದರು, ನಟ ನಟಿಯರು, ಕ್ರೀಡಾ ತಾರೆಯರು, ರಾಜಕಾರಣಿಗಳು, ಅಘೋರಿಗಳು, ನಾಗಾಸಾಧುಗಳು, ಸಾಧು ಸಂತರು, ಮಠಾಧಿಪತಿಗಳು, ಜನಸಾಮಾನ್ಯರು ಸೇರಿದಂತೆ ಸುಮಾರು 50 ಕೋಟಿಗೂ ಹೆಚ್ಚು ಮಂದಿ ಈಗಾಗಲೇ ಪುಣ್ಯಸ್ನಾನ ಮಾಡಿದ್ದಾರೆ.
ಇದೀಗ ಇಸ್ರೋ ಮಾಜಿ ಅಧ್ಯಕ್ಷ , ಚಂದ್ರಯಾನ 3 ಯಶಸ್ಸಿನ ರೂವಾರಿ ಡಾ. ಎಸ್. ಸೋಮನಾಥ್ ಕೂಡ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ವಿವಿಧ ಕಾರ್ಯಕ್ರಮಗಳಿಗಾಗಿ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ್ದ ಸೋಮನಾಥ್, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದಾರೆ.
ಮಹಾ ಕುಂಭ ನಗರಕ್ಕೆ ಭೇಟಿ ನೀಡಲು ಇಸ್ರೋದ ಮಾಜಿ ಮುಖ್ಯಸ್ಥರು ಯಾವುದೇ ಶಿಷ್ಟಾಚಾರವನ್ನು ತೆಗೆದುಕೊಂಡಿರಲಿಲ್ಲ ಎನ್ನಲಾಗಿದೆ. ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಯಾಗ್‌ರಾಜ್‌ಗೆ ಬಂದಿದ್ದ ಡಾ. ಸೋಮನಾಥ್, ಇಸ್ರೋದಲ್ಲಿ ತಮ್ಮ ಜೂನಿಯರ್ ಆಗಿದ್ದ ಪ್ರಯಾಗ್‌ರಾಜ್‌ನ ಅರ್ಪಿತ್ ಪಾಂಡೆ ಅವರೊಂದಿಗೆ ಮಹಾಕುಂಭಮೇಳಕ್ಕೆ ಆಗಮಿಸಿದರು.
ಪ್ರಯಾಗ್ ರಾಜ್‌ನಲ್ಲಿ ತಾವು ಉಳಿದುಕೊಂಡಿದ್ದ ಸ್ಥಳದಿಂದ ಪುಟ್ಟ ಚೀಲದಲ್ಲಿ ತಮ್ಮ ಬಟ್ಟೆ ಬರೆ ತೆಗೆದುಕೊಂಡು, ಬೆಳಗ್ಗೆ ಕಾಲ್ನಡಿಗೆಯಲ್ಲೇ ಸಂಗಮ ಸ್ಥಳಕ್ಕೆ ಹೋದ ಡಾ. ಸೋಮನಾಥ್, ಅಲ್ಲಿ ಪುಣ್ಯಸ್ನಾನ ಮಾಡಿದರು.
ಇನ್ನು ಪುಣ್ಯಸ್ನಾನದ ದಿವ್ಯ ಅನುಭವದ ಬಗ್ಗೆ ಡಾ. ಎಸ್. ಸೋಮನಾಥ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಮಹಾ ಕುಂಭಮೇಳವು ಮಾನವಕುಲವು ಬ್ರಹ್ಮಾಂಡದ ಸಂಪರ್ಕವನ್ನು ಕಂಡುಕೊಳ್ಳುವ ಮತ್ತು ಜೀವನದ ಅಮೃತವಾದ ‘ಅಮೃತ’ವನ್ನು ಪಡೆಯುವ ಪ್ರಯತ್ನವಾಗಿ ಅನುಭವಿಸಲ್ಪಟ್ಟಿತು. ನಾನು ಸಾಧುಗಳ ಸಂಗಮದಲ್ಲಿ ತ್ರಿವೇಣಿ ಸಂಗಮದಲ್ಲಿ ಆನಂದದಾಯಕ ಸ್ನಾನ ಮಾಡಿದೆ ಅಂತ ಸಂತಸ ವ್ಯಕ್ತಪಡಿಸಿದ್ದಾರೆ.