ವರ್ಷದ ಮೊದಲ ಉಡಾವಣೆಗೆ ಸಜ್ಜಾದ ಇಸ್ರೋ: ಮೂರು ಉಪಗ್ರಹ ಹೊತ್ತು ನಭಕ್ಕೆ ಚಿಮ್ಮಲಿದೆ ಪಿಎಸ್ಎಲ್‌ವಿ-ಸಿ52

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತೀಯ ಬಾಹ್ಯಾಕಾಶ ಸಂಸ್ಥೆ ನಾಳೆ ಫೆ.14ರಂದು ಪಿಎಸ್‌ ಎಲ್‌ ವಿ-ಸಿ 52 ರಾಕೆಟ್‌ ಉಡಾವಣೆಗೊಳ್ಳಲು ಸಜ್ಜಾಗಿದೆ.
ಈ ರಾಕೆಟ್ ಮೂಲಕ ಎರಡು ರಾಡಾರ್‌ ಇಮೇಟಿಂಗ್‌ ಉಪಗ್ರಹ ರಿಸಾಟ್‌ 1ಎ ಸೇರಿ ಮೂರು ಉಪಗ್ರಹಗಳನ್ನು ಉಡಾವಣೆ ಮಾಡಲಾಗುತ್ತದೆ. ಇದರೊಂದಿಗೆ ಭೂ ವೀಕ್ಷಣಾ ಉಪಗ್ರಹದ ಮೂಲಕ ಕೃಷಿ, ಅರಣ, ಮಣ್ಣಿನ ತೇವಾಂಶ ಮತ್ತು ಜಲವಿಜ್ಞಾನ ಮತ್ತು ಪ್ರವಾಹದ ಕುರಿತು ಮಾಹಿತಿ ಸಿಗಲಿದೆ. ಇದು 5 ವರ್ಷಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು, ಪ್ರತಿ ಹಗಲು ರಾತ್ರಿ ಕಾರ್ಯನಿರ್ವಹಿಸಿ, ಯಾವುದೇ ಪ್ರತಿಕೂಲ ಹವಾಮಾನದ ಮಾಹಿತಿಯನ್ನು ರವಾನಿಸುತ್ತದೆ.
ಈ ಉಪಗ್ರಹದ ಇಂಜಿನ್‌ ಗೆ ವಿವಿಧ ರೀತಿಯ ಇಂಧನ ತುಂಬಲಾಗುತ್ತದೆ. ಮೊದಲ ಮತ್ತು ಮೂರನೇ ಹಂತದಲ್ಲಿ ಘನ ಇಂಧನ ಹಾಗೂ ಎರಡು ಮತ್ತು ನಾಲ್ಕನೇ ಹಂತದಲ್ಲಿ ದ್ರವ ಇಂಧನ ತುಂಬಲಾಗುತ್ತದೆ.
ಈ ರಾಕೆಟ್‌ 44.4 ಮೀಟರ್‌ ಎತ್ತರವಾಗಿದ್ದು, 321 ಟನ್‌ ತೂಕ ಇರಲಿದೆ. ಇದಕ್ಕೆ 9 ಟನ್‌ ಇಂಧನ ತುಂಬಿಸಲಾಗುತ್ತದೆ. ಜತೆಗೆ 6 ಬೂಸ್ಟರ್‌ ಮೋಟರ್‌ ಗಳನ್ನು ಹೊಂದಿರುತ್ತದೆ.
ಸೋಮವಾರ ಬೆಳಗ್ಗೆ 5:59ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಪ್ಯಾಡ್‌ ಮೂಲಕ ಉಡಾವಣೆಗೊಳ್ಳಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!