ನಭಕ್ಕೆ ಜಿಗಿದ ಸಿಂಗಾಪುರದ 7 ಉಪಗ್ರಹಗಳನ್ನು ಹೊತ್ತ PSLV-C56!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) PSLV-C56 ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಿದೆ. ನೆಲ್ಲೂರು ಜಿಲ್ಲೆಯ ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ PSLV-C56 ಸಿಂಗಾಪುರದ ಏಳು ಉಪಗ್ರಹಗಳನ್ನು ಹೊತ್ತು ಇಂದು ಬೆಳಗ್ಗೆ ನಭಕ್ಕೆ ಜಿಗಿದಿದೆ.

ಸಿಂಗಾಪುರ ಡಿಎಸ್-ಎಸ್‌ಎಆರ್ ಸೇರಿದಂತೆ 422 ಕೆಜಿ ತೂಕದ ಏಳು ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಾಗುತ್ತಿದೆ. ರಾಕೆಟ್ ಅನ್ನು ನಾಲ್ಕು ಹಂತಗಳಲ್ಲಿ ಉಡಾವಣೆ ಮಾಡಲಾಯಿತು ಎಂದು ಇಸ್ರೋ ಟ್ವೀಟ್‌ ಮಾಡಿದ್ದು, PSLV-C56 ಅನ್ನು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (SDSC) ನಲ್ಲಿರುವ ಮೊದಲ ಉಡಾವಣಾ ಪ್ಯಾಡ್ (FLP) ನಿಂದ ಉಡಾವಣೆ ಮಾಡಲಾಯಿತು.

PSLV-C56 / DS-SAR ಎಂಬುದು ಸಿಂಗಾಪುರದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್‌ನ (NSIL) ಮೀಸಲಾದ ವಾಣಿಜ್ಯ ಮಿಷನ್ ಆಗಿದೆ. DS-SAR, ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಉಪಗ್ರಹವು ಕಾರ್ಯಾಚರಣೆಯ ಪ್ರಾಥಮಿಕ ಉಪಗ್ರಹವಾಗಿದೆ. ಇದರ ಜೊತೆಗೆ ಸಿಂಗಾಪುರಕ್ಕೆ ಸೇರಿದ ಆರು ಸಹ-ಪ್ರಯಾಣಿಕ ಗ್ರಾಹಕ ಉಪಗ್ರಹಗಳೂ ಇವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!