Friday, March 31, 2023

Latest Posts

ಮೇಘಾ-ಟ್ರೋಫಿಕಸ್-1 ಉಪಗ್ರಹವನ್ನು ಯಶಸ್ವಿಯಾಗಿ ನಾಶಪಡಿಸಿದ ಇಸ್ರೋ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಸ್ರೋ ಒಂದು ದಶಕದ ಸುದೀರ್ಘ ಕಾರ್ಯಾಚರಣೆಯ ಬಳಿಕ ಸತ್ತ ಮೇಘಾ ಟ್ರೋಫಿಕ್ಸ್ ಉಪಗ್ರಹವನ್ನು ಯಶಸ್ವಿಯಾಗಿ ಡಿ-ಆರ್ಬಿಟ್ ಮಾಡಿದೆ.  ಭೂ ಕಕ್ಷೆಯಲ್ಲಿರುವ ಮೇಘಾ-ಟ್ರೋಫಿಕಸ್-1 (MT1) ಉಪಗ್ರಹವನ್ನು ಇಸ್ರೋ ಯಶಸ್ವಿಯಾಗಿ ನಾಶಪಡಿಸಿದೆ. ಭೂಮಿಯ ಮೇಲಿನ ಹವಾಮಾನವನ್ನು ಊಹಿಸಲು ಫ್ರೆಂಚ್ ಬಾಹ್ಯಾಕಾಶ ಏಜೆನ್ಸಿಯ ಸಹಯೋಗದೊಂದಿಗೆ 2011 ರಲ್ಲಿ ಇಸ್ರೋ ಈ ಉಪಗ್ರಹವನ್ನು ಉಡಾವಣೆ ಮಾಡಿತ್ತು.  ಆದರೆ 2021 ರಲ್ಲಿ ಅದು ಸಂಪೂರ್ಣವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದೆ.

ಹತ್ತು ವರ್ಷಗಳ ಸೇವೆಯ ನಂತರ ಮಂಗಳವಾರ ಸಂಜೆ ಭೂಮಿಯ ವಾತಾವರಣವನ್ನು ಪ್ರವೇಶಿಸಿದ ನಂತರ, ಉಪಗ್ರಹವು ಪೆಸಿಫಿಕ್ ಮಹಾಸಾಗರದ ಮೇಲಿರುವ ಆಕಾಶದಲ್ಲಿ ವಿಘಟಿಸಿ ಸುಟ್ಟುಹೋದ ಕಾರಣ ಅದರ ಕಕ್ಷೆಯಿಂದ ಕೆಳಕ್ಕೆ ತರಲಾಯಿತು. ಈ ಪ್ರಯೋಗದ ಯಶಸ್ಸಿನೊಂದಿಗೆ ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾದೊಂದಿಗೆ ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!