ಗಗನಯಾನ, ಚಂದ್ರಯಾನದ ಜೊತೆಗೆ ಸಮುದ್ರಯಾನತ್ತ ಇಸ್ರೋ ಹೆಜ್ಜೆ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಾರತೀಯ ಬಾಹ್ಯಾಕಾಶ ಸಂಸ್ಥೆ ಬಾಹ್ಯಾಕಾಶ ಜಗತ್ತಿನಲ್ಲಿ ನೂರಾರು ಮೈಲಿಗಲ್ಲುಗಳನ್ನು ನೆಟ್ಟು ಭಾರತ ತ್ರಿವರ್ಣ ಧ್ವಜವನ್ನು ಎಲ್ಲೆ ಹಾರಾಡಿಸುತ್ತಿದೆ. . ಇಸ್ರೋ ಭಾರತದ ಅತಿದೊಡ್ಡ ಹೆಮ್ಮೆಯಾಗಿ ಬೆಳೆದು ಬಂದಿದೆ. ರಾಕೆಟ್​​ನ ಬಿಡಿಭಾಗಗಳನ್ನು ಸೈಕಲ್​ ಮೇಲೆ ಸಾಗಿಸುವ ಸ್ಥಿತಿಯಿಂದ ಚಂದ್ರನ ಅಂಗಳದ ಮೇಲೆ ಭಾರತದ ಬಾವುಟವನ್ನು ನೆಡುವ ಮಟ್ಟಕ್ಕೆ ಬೆಳೆದಿದೆ.ಜೊತೆಗೆ ಹೊಸ ಹೊಸ ಆವಿಷ್ಕಾರಗಳಿಗೆ, ಸಾಹಸಗಳಿಗೆ ಇಸ್ರೋ ಕೈ ಹಾಕುತ್ತಿದೆ ಅದರಲ್ಲಿ ಪ್ರಮುಖವಾಗಿ ಮೂರು ಯೋಜನೆಗಳನ್ನು ಇಸ್ರೋ ಸಿದ್ಧಮಾಡಿಕೊಂಡಿದೆ. ಗಗನಯಾನ, ಚಂದ್ರಯಾನ4 ಮತ್ತು ಸಮುದ್ರಯಾನ ಎಂಬ ಮೂರು ಮಹಾಸಾಹಸಗಳನ್ನು ಯಶಸ್ವಿಯಾಗಿ ಮಾಡಿ ಮುಗಿಸಲು ಇಸ್ರೋ ಸಜ್ಜಾಗಿದೆ.

2027ರಲ್ಲಿ ಚಂದ್ರಯಾನ-4 ನಡೆಸಿ ಚಂದಿರನ ಅಂಗಳದಲ್ಲಿ ಸ್ಯಾಂಪಲ್​ ಕಲ್ಲುಗಳನ್ನು ಭೂಮಿಗೆ ತರುವ ಯೋಜನೆಯನ್ನು ಇಸ್ರೋ ಹಾಕಿಕೊಂಡಿದೆ. ಮುಂದಿನ ವರ್ಷ ಅಂದ್ರೆ 2026ರಲ್ಲಿ ಭಾರತ ಸಮುದ್ರಯಾನವನ್ನು ಕೂಡ ಕೈಗೊಳ್ಳಲಿದೆ. ಸಮುದ್ರದ ಆಳದಲ್ಲಿ ಹಲವು ಸಂಶೋಧನೆಗಳನ್ನು ನಡೆಸಲು ಸಜ್ಜಾಗಿದೆ. ಇನ್ನು ಗಗನಯಾನ ಯೋಜನೆ ಈಗಾಗಲೇ ಆರಂಭವಾಗಿದ್ದು ಭಾರತದ ಗಗನಯಾತ್ರಿಗಳ ಮೊದಲ ಬ್ಯಾಚ್​ ಸದ್ಯದಲ್ಲಿಯೇ ಬಾಹ್ಯಾಕಾಶಕ್ಕೆ ಹಾರಲಿದೆ.

ಈ ಕುರಿತು ಮಾಹಿತಿ ನೀಡಿದ ಕೇಂದ್ರ ಸಚಿವ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಜೀತೆಂದ್ರ ಸಿಂಗ್ , 2027ಕ್ಕೆ ಮತ್ತೊಂದು ಸಾಹಸಕ್ಕೆ ಇಸ್ರೋ ಇಳಿಯಲಿದೆ. ಈಗಾಗಲೇ ಮೂರು ಬಾರಿ ಚಂದ್ರಯಾನ ಮಾಡಿದ ಇಸ್ರೋ. ಈ ನಾಲ್ಕನೇ ಬಾರಿಗೆ ಚಂದ್ರನೆಡೆಗೆ ಉಪಗ್ರಹ ಹಾರಿಸಲು ಸಜ್ಜಾಗಿದೆ. ಚಂದಿರನ ಅಂಗಳದಲ್ಲಿರುವ ಕಲ್ಲುಗಳನ್ನು ಭೂಮಿಗೆ ತಂದು ಅವುಗಳನ್ನು ಪರೀಕ್ಷಿಸಲು ಸಜ್ಜಾಗಿದೆ. ಇದಕ್ಕಾಗಿ ಕನಿಷ್ಠ ಎರಡು ಪ್ರತ್ಯೇಕವಾಗಿ ಅತ್ಯಧಿಕ ಭಾರ ಎತ್ತಬಲ್ಲ ಎಲ್​ವಿಎಮ್​ನ ಮೂರು ರಾಕೆಟ್​ಗಳನ್ನು ಬಳಸಲಾಗುತ್ತದೆ. ಐದು ವಿಧವಾದ ಭಾಗಗಳನ್ನು ಇದು ತೆಗೆದುಕೊಂಡು ಹೋಗಲಿದೆ ಎಂದು ಹೇಳಿದ್ದಾರೆ.

ಇನ್ನು ಗಗನಯಾನದ ಬಗ್ಗೆಯೂ ಮಾತನಾಡಿರುವ ಸಚಿವರು. ಗಗನಯಾನ ಭಾರತೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಒಂದು ಯೋಜನೆಯಾಗಿದೆ. ಈಗಾಗಲೇ ಅದಕ್ಕಾಗಿ ವಿಶೇಷ ಸ್ಪೇಸ್​ಕ್ರಾಫ್ಟ್​​ನ್ನು ಸಿದ್ಧಗೊಳಿಸಿದ್ದು ಅವರನ್ನು ಭೂಮಿಯಿಂದ ಬಾಹ್ಯಾಕಾಶಕ್ಕೆ ಮತ್ತು ಬಾಹ್ಯಾಕಾಶದಿಂದ ಭೂಮಿಗೆ ಸುರಕ್ಷಿತವಾಗಿ ಕರೆದುಕೊಂಡು ಬರಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಈ ಒಂದು ಮಿಷನ್ ಮುಂದಿನ ವರ್ಷ ಲಾಂಚ್ ಆಗಲಿದೆ ಎಂದು ಹೇಳಿದ್ದಾರೆ.

ಇನ್ನು ಸಮುದ್ರಯಾನವೂ ಕೂಡ 2026ರಲ್ಲಿಯೇ ಆರಂಭವಾಗಲಿದ್ದು ಮೂರು ವಿಜ್ಞಾನಿಗಳು ಸಮುದ್ರದಲ್ಲಿ ಸುಮಾರು 6 ಸಾವಿರ ಮೀಟರ್​ನಷ್ಟು ಆಳಕ್ಕೆ ಹೋಗಿ ಅಲ್ಲಿರುವ ಖನಿಜಗಳ ಬಗ್ಗೆ, ವಿರಳವಾದ ಮೆಟಲ್ಸ್​ ಬಗ್ಗೆ ಸಂಶೋಧನೆ ನಡೆಸಲಿದ್ದಾರೆ. ಸದ್ಯ ಈಗ ಎಲ್ಲರ ಕಣ್ಣು ರಾಷ್ಟ್ರೀಯ ಸಮುದ್ರ ತಂತ್ರಜ್ಞಾನ ಸಂಸ್ಥೆಯ ಮೇಲೆಯೇ ಇದೆ ಎಂದು ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!