ISSF World Cup: ಚಿನ್ನಕ್ಕೆ ಮುತ್ತಿಟ್ಟ ಇಳವೆನ್ನಿಲ್ಲಾ ವಾಳವರಿಯನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ 2023 (ISSF World Cup 2023) ರಲ್ಲಿ ಭಾರತದ ಶೂಟರ್ ಇಳವೆನ್ನಿಲಾ ವಾಳರಿವನ್, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ವಾಳರಿವನ್ (Elavenil Valarivan) ಫೈನಲ್‌ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಫ್ರಾನ್ಸ್‌ನ ಓಸಿಯಾನ್ ಮುಲ್ಲರ್, 251.9 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಿಯಾಲೆ ಜಾಂಗ್, 229.0 ಪಾಯಿಂಟ್ಸ್‌ನೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.

ಇಳವೆನ್ನಿಲಾ 630.5 ಅಂಕಗಳೊಂದಿಗೆ 8ನೇಯವರಾಗಿ ಫೈನಲ್‌ ಸುತ್ತು ಪ್ರವೇಶಿಸಿದರು. ಪ್ರಶಸ್ತಿ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ ಪ್ರತಿ ಸಲ 10.01 ಕ್ಕೂ ಹೆಚ್ಚು ಪಾಯಿಂಟ್ಸ್‌ ಗಿಟ್ಟಿಸುವ ಮೂಲಕ ಉತ್ತಮ ಸಾಧನೆ ಮಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!