ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಮನಗರ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ

ಹೊಸದಿಗಂತ ವರದಿ ರಾಮನಗರ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ)ದ 2022-25ನೇ ಸಾಲಿನ ರಾಮನಗರ ಜಿಲ್ಲಾ ಘಟಕದ ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆ ಫಲಿತಾಂಶವನ್ನು ಜಿಲ್ಲಾ ಚುನಾವಣಾಧಿಕಾರಿ ಕರೀಗೌಡ ಅವರು ಅಧಿಕೃತವಾಗಿ ಪ್ರಕಟಿಸಿ ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ(ಕೆಯುಡಬ್ಲೂಜೆ) ಚುನಾವಣೆಯನ್ನು ನಿಯಮಬದ್ಧವಾಗಿ ನಡೆಸಲಾಗಿಲ್ಲವೆಂದು ಆರೋಪಿಸಿ ಚುನಾವಣೆ ರದ್ದು ಮಾಡುವಂತೆ ಎಚ್.ಎಲ್. ಅಮರನಾಥ್ ಮತ್ತಿತರರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಘಟಕಕ್ಕೆ ನಡೆದ ಚುನಾವಣಾ ಪಲಿತಾಂಶವನ್ನು ಪ್ರಕಟಿಸಿದ ಚುನಾವಣಾಧಿಕಾರಿಗಳು ವಿಜೇತರಿಗೆ ಪ್ರಮಾಣಪತ್ರ ವಿತರಿಸಿದರು.

ಫೆ.27 ರಂದು ನಡೆದ ಚುನಾವಣೆಯಲ್ಲಿ ಅಂತಿಮವಾಗಿ ಟಿ.ಶಿವರಾಜು ಅವರು ತಮ್ಮ ಪ್ರತಿಸ್ಪರ್ಧಿ ಮಂಜುನಾಥ್.ಪಿ ಅವರಿಗಿಂತ 27 ಮತಗಳ ಅಂತರದಿಂದ ಜಯ ಸಾಧಿಸಿದರು. ಹಾಗೆಯೇ 15 ಜನ ನಿರ್ದೇಶಕರು ನಿರಾಯಾಸವಾಗಿ ಜಲಶಾಲಿಗಳಾದರು. ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿಯಾಗಿ ನಿವೃತ್ತ ಉಪನ್ಯಾಸಕ ಕರೀಗೌಡ, ಸಹಾಯಕ ಚುನಾವಣಾಧಿಕಾರಿಯಾಗಿ ಹಿರಿಯ ಪತ್ರಕರ್ತ ಕಾ.ಪ್ರಕಾಶ್ ಅವರು ಕಾರ್ಯ ನಿರ್ವಹಿಸಿದರು.

ನೂತನ ಪದಾಧಿಕಾರಿಗಳು :
ರಾಮನಗರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಬಿ.ವಿ.ಸೂರ್ಯಪ್ರಕಾಶ್, ಉಪಾಧ್ಯಕ್ಷರಾಗಿ ಎಂ.ಶಿವಮಾಧು(ಚನ್ನಪಟ್ಟಣ), ಜೆ.ನರಸಿಂಹಮೂರ್ತಿ(ಮಾಗಡಿ), ಪಿ.ವೈ.ರವೀಂದ್ರ ಹೇರ್ಳೆ(ರಾಮನಗರ), ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಟಿ.ಶಿವರಾಜು, ಕಾರ್ಯದರ್ಶಿಗಳಾಗಿ ಟಿ.ಎಂ.ಶ್ರೀನಿವಾಸ್(ಮಾಗಡಿ), ಜಿ.ಗುರುಮೂರ್ತಿ(ಚನ್ನಪಟ್ಟಣ), ಸೈಯದ್ ಅಬ್ದುಲ್ ಕರೀಂ(ಚನ್ನಪಟ್ಟಣ), ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಿದ್ದಲಿಂಗೇಗೌಡ(ಮಧು) ಅವರುಗಳು ಆಯ್ಕೆಯಾಗಿದ್ದಾರೆ.
ಜಿಲ್ಲಾ ಕಾರ್ಯಕಾರಿ ಸಮಿತಿಗೆ 15 ಜನ ನಿರ್ದೇಶಕರು ಆಯ್ಕೆಯಾಗಿದ್ದು, ರಾಜು.ಪಿ.ಎಸ್(ಪಾದ್ರಳ್ಳಿ), ಗಿರೀಶ್ ಎಸ್.ವಿ, ಕೇಶವಮೂರ್ತಿ, ಎಂ.ಎಸ್.ಸಿದ್ಧಲಿಂಗೇಶ್ವರ್, ಶಿವಲಿಂಗಯ್ಯ, ಸುಧಾರಾಣಿ, ದೇವರಾಜು ಎಂ.ಪಿ, ಅರುಣ್.ಕೆ, ಗಿರೀಶ್.ಸಿ.ಜಿ, ಜಗದೀಶ್.ಎಂ, ಮಂಜುನಾಥ.ಎಸ್, ರಂಗನಾಥ ಬಾಬು.ಎಚ್.ಎಲ್, ಗಿರೀಶ್ ಕುಮಾರ್.ಕೆ.ಸಿ, ಗಂಗಾಧರ, ಸೈಯದ್ ಯಾಹಿಯ ಅವರುಗಳು ನೂತನ ನಿರ್ದೇಶಕರುಗಳಾಗಿ ಚುನಾಯಿತರಾಗಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here