ಹೊಸದಿಗಂತ ವರದಿ, ಬೆಳಗಾವಿ
ನನ್ನ ಸಿಡಿ ಪ್ರಕರಣದಲ್ಲಿದ್ದ ತಂಡವೇ ಸಂತೋಷ ಪಾಟೀಲ್ ಪ್ರಕರಣದಲ್ಲೂ ಷಡ್ಯಂತ್ರ ಮಾಡಿದೆ ಎಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಹೊಸ ಬಾಂಬ್ ಸ್ಫೋಟಿಸಿದ್ದಾರೆ.
ಗುರುವಾರ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ ಪಾಟೀಲ್ ಅವರ ತಾಲ್ಲೂಕಿನ ಬಡಸ ಗ್ರಾಮದ ಮನೆಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಸಮಗ್ರ ತನಿಖೆಯಾಗುವರೆಗೂ ಸಚಿವ ಕೆ.ಎಸ್. ಈಶ್ವರಪ್ಪ ರಾಜಿನಾಮೆ ನೀಡಬಾರದು ಎಂದರು.
ನನ್ನ ಸಿಡಿ ಕೇಸ್ ಮತ್ತು ಸಂತೋಷ್ ಕೇಸ್ ಸಿಬಿಐ ಗೆ ಒಪ್ಪಿಸಬೇಕು ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮತ್ತು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆಸಿದರು.
ಹೈಕಮಾಂಡ್ ನಾಯಕರ ಪರ್ಮಿಷನ್ ತಗೆದುಕೊಂಡು ಸೋಮವಾರ ಬೆಳಗ್ಗೆ 11 ಗಂಟೆಗೆ ಸುದ್ದಿಗೋಷ್ಠಿ ನಡಿಸಿ ಎಲ್ಲವನ್ನೂ ಬಿಚ್ಚಿಡುತ್ತೇನೆ. ಈಶ್ವರಪ್ಪ, ರಮೇಶ ಜಾರಕಿಹೊಳಿ ವಿರುದ್ಧ ಸೇಮ್ ಟೀಮ್ ಷಡ್ಯಂತ್ರ ನಡೆದಿದೆ ಎಂದರು.