Sunday, March 26, 2023

Latest Posts

ದೆಹಲಿ-ಮುಂಬೈ ಕಚೇರಿಗಳ ಮೇಲೆ ಐಟಿ ದಾಳಿ: ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದ ಬಿಬಿಸಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಬಿಬಿಸಿ (BBC)ಯ ದೆಹಲಿ ಮತ್ತು ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ (Income Tax Department) ಇಲಾಖೆ ದಾಳಿ ನಡೆಸಿದ್ದು, ಅಗತ್ಯ ಮಾಹಿತಿಯನ್ನು ಕಲೆಹಾಕಿದೆ.

ಈ ಕುರಿತು ಬಿಬಿಸಿ ಪ್ರತಿಕ್ರಿಯಿಸಿದ್ದು, ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದು ಮಂಗಳವಾರ ಹೇಳಿದೆ.
ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸುವ ಭರವಸೆ ಇದೆ ಎಂದು ಬಿಬಿಸಿ ನ್ಯೂಸ್‌ನ ಪತ್ರಿಕಾ ವಿಭಾಗವು ಟ್ವೀಟ್ ಮಾಡಿದೆ.

ಬೆಳಿಗ್ಗೆ 11 ಗಂಟೆಗೆ ಐಟಿ ಅಧಿಕಾರಿಗಳು ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿ ತಲುಪಿದ್ದಾರೆ. ಬಿಬಿಸಿ ಸಿಬ್ಬಂದಿಗಳಲ್ಲಿ ತಮ್ಮ ಫೋನ್‌ಗಳನ್ನು ಆವರಣದೊಳಗೆ ನಿರ್ದಿಷ್ಟ ಸ್ಥಳದಲ್ಲಿ ಇರಿಸಲು ಐಟಿ ಅಧಿಕಾರಿಗಳು ಕೇಳಿಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಂಡನ್ ಪ್ರಧಾನ ಕಚೇರಿಯ ಸಾರ್ವಜನಿಕ ಪ್ರಸಾರಕ ಮತ್ತು ಅದರ ಭಾರತೀಯ ಅಂಗದ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಇಲಾಖೆ ಪರಿಶೀಲಿಸುತ್ತಿದೆ ಎಂದು ಅವರು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!