ನಮ್ಮ ಫೋಟೋಗಳನ್ನು ಎಡಿಟ್‌ ಮಾಡಲಾಗಿದೆ: ಕುಸ್ತಿಪಟುಗಳ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸರಣ್ ಸಿಂಗ್ ವಿರುದ್ಧ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಕುಸ್ತಿಪಟುಗಳನ್ನು ಭಾನುವಾರ ಬಂಧಿಸಿರುವುದು ಗೊತ್ತೇ ಇದೆ. ಅವರನ್ನು ಬಂಧಿಸಿ ಬಸ್‌ನಲ್ಲಿ ಕರೆದೊಯ್ಯುವಾಗ, ಸಂಗೀತಾ ಫೋಗಟ್ ಮತ್ತು ವಿನೇಶ್ ಫೋಗಟ್ ನಗುತ್ತಾ ಸೆಲ್ಫಿ ತೆಗೆದುಕೊಳ್ಳುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ವಾಸ್ತವವಾಗಿ ಇವು ಮೂಲ ಫೋಟೋಗಳಲ್ಲ. ತಮ್ಮ ಬಂಧನದ ನಂತರ ಪೊಲೀಸರು ಕರೆದೊಯ್ಯುವಾಗ ತೆಗೆದ ಫೋಟೋಗಳನ್ನು ಎಡಿಟ್ ಮಾಡಿದ್ದಾರೆ ಎಂದು ಕುಸ್ತಿಪಟು ಬಜರಂಗ್ ಪುನಿಯಾ ಗಂಭೀರ ಆರೋಪವನ್ನು ಮಾಡಿದ್ದಾರೆ.

ಬಜರಂಗ್ ಪುನಿಯಾ ಅವರು ಎರಡು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ – “ಒಂದು ಮಾರ್ಫಿಂಗ್, ಇನ್ನೊಂದು ನೈಜವಾಗಿದೆ. ಸಂಗೀತಾ ಫೋಗಟ್ಚಾ ಮತ್ತು ವಿನೇಶ್ ಫೋಗಟ್ ನಗುತ್ತಿರುವಂತೆ ಕಾಣಲಿಲ್ಲ. ಐಟಿ ಸೆಲ್ ನವರು ಈ ಸುಳ್ಳು ಚಿತ್ರವನ್ನು ಹಬ್ಬಿಸುತ್ತಿದ್ದಾರೆ. ಈ ನಕಲಿ ಚಿತ್ರವನ್ನು ಪೋಸ್ಟ್ ಮಾಡಿದವರ ವಿರುದ್ಧ ನಾವು ದೂರು ದಾಖಲಿಸುತ್ತೇವೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ನೂತನ ಸಂಸತ್ ಭವನವನ್ನು ಉದ್ಘಾಟಿಸಿದ ಸ್ಥಳದಿಂದ 3 ಕಿ.ಮೀ ದೂರದಲ್ಲಿರುವ ಜಂತರ್ ಮಂತರ್‌ನಲ್ಲಿ ಪ್ರತಿಭಟನಾ ಸ್ಥಳದಲ್ಲಿ ಅವ್ಯವಸ್ಥೆ ನೆಲೆಯೂರಿತ್ತು. ಕುಸ್ತಿಪಟುಗಳು ಸಂಸತ್ ಭವನದತ್ತ ರ್ಯಾಲಿ ಮಾಡಲು ಯತ್ನಿಸಿದಾಗ ಈ ಸಂದರ್ಭ ಪೊಲೀಸರು ಹಾಗೂ ಕುಸ್ತಿಪಟುಗಳ ನಡುವೆ ವಾಗ್ವಾದ ನಡೆಯಿತು. ನಂತರ, ಕುಸ್ತಿಪಟುಗಳನ್ನು ಬಲವಂತವಾಗಿ ಬಂಧಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here