ದಿನಭವಿಷ್ಯ| ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿ ಸಮತೋಲನೆ ಸಾಧಿಸಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಆದಾಯ ಮತ್ತು ವೆಚ್ಚಕ್ಕೆ ಸಂಬಂಧಿಸಿ ಸಮತೋಲನೆ ಸಾಧಿಸಿ. ಆಪ್ತರ ನೆರವಿನಿಂದ ಕೌಟುಂಬಿಕ ಸಮಸ್ಯೆ ಪರಿಹಾರ ಕಂಡೀತು. ವೃತ್ತಿಯಲ್ಲಿ  ನೆಮ್ಮದಿ.

ವೃಷಭ
ಆತ್ಮೀಯ ಬಂಧುಗಳ ಜತೆ ಉತ್ತಮ ಬಾಂಧವ್ಯ. ಭಿನ್ನಮತ ಉಂಟಾಗದು. ಆದರೆ ಬಿರುಕು ಸೃಷ್ಟಿಸಲು ಯತ್ನಿಸುವವರ ಕುರಿತು ಎಚ್ಚರವಿರಲಿ.

ಮಿಥುನ
ಸಣ್ಣ ಸಮಸ್ಯೆಯನ್ನು ಗಂಭೀರಗೊಳಿಸಬೇಡಿ. ಎಲ್ಲರೊಂದಿಗೆ
ಹೊಂದಾಣಿಕೆ ಸಾಧಿಸಿ. ಸಂಬಂಧದಲ್ಲಿ ಹುಳಿ ಹಿಂಡಲು ಕೆಲವರು ಯತ್ನಿಸಬಹುದು.

ಕಟಕ
ಕೌಟುಂಬಿಕ ಭಿನ್ನಮತ. ವಾದವಿವಾದ ಒಳಿತಲ್ಲ. ಅದರಿಂದ ಬಿಕ್ಕಟ್ಟು ಹೆಚ್ಚೀತು. ಸಂಧಾನದ ಮೂಲಕ ಬಿಕ್ಕಟ್ಟು ಪರಿಹರಿಸಿ. ಭಾವನಾತ್ಮಕ ಏರುಪೇರು.

ಸಿಂಹ
ಕೆಲಸದಲ್ಲಿ ಹೆಚ್ಚುವರಿ ಹೊಣೆಗಾರಿಕೆ. ಅದನ್ನು ನಿಭಾಯಿಸಿರಿ. ಅಸಹನೆಯಿಂದ ಗೊಣಗದಿರಿ. ಅವಶ್ಯ ನೆರವು ನಿಮಗೆ ಲಭಿಸುವುದು.

ಕನ್ಯಾ
ವೃತ್ತಿಯಲ್ಲಿ ಉದ್ದೇಶಿತ ಗುರಿ ಸಾಧನೆ. ನಿಮ್ಮ ಸಡಿಲ ಮಾತು ವಿವಾದ ಸೃಷ್ಟಿಸಬಹುದು. ಹಾಗಾಗಿ ಮಾತಿನ ಮೇಲೆ ನಿಯಂತ್ರಣವಿಡಿ.  ಯಾರನ್ನೂ ಟೀಕಿಸದಿರಿ.

ತುಲಾ
ಕಾರ್ಯವೊಂದು ಕಷ್ಟ ಕೊಡಬಹುದು. ಸುಲಭದಲ್ಲಿ ಈಡೇರದು. ಹೆಚ್ಚಿನ ಶ್ರಮ ಅವಶ್ಯ. ಕೆಲವರ ಅಸಹಕಾರವನ್ನೂ ಎದುರಿಸುವಿರಿ.

ವೃಶ್ಚಿಕ
ಉದ್ದೇಶಿತ ಕಾರ್ಯ ಕೈಗೂಡುವುದಿಲ್ಲ. ಇದರಿಂದ ನಿರಾಶೆ. ಹಣಕ್ಕೆ ಸಂಬಂಧಿಸಿ ರಿಸ್ಕ್ ತೆಗೆದುಕೊಳ್ಳದಿರಿ. ಯೋಚಿಸಿ, ಯೋಜಿಸಿ ಹೂಡಿಕೆ ಮಾಡಿ.

ಧನು
ಉದ್ಯೋಗದಲ್ಲಿ ಬಿಕ್ಕಟ್ಟು ನಿವಾರಣೆ. ಕಾರ್ಯ ಸುಲಭದಲ್ಲಿ ನೆರವೇರುವುದು. ಆರ್ಥಿಕ ಬಿಕ್ಕಟ್ಟು ಪರಿಹಾರ.  ಕೌಟುಂಬಿಕ ಸಹಕಾರ, ಸಮಾಧಾನ.

ಮಕರ
ಆಪ್ತ ವ್ಯಕ್ತಿಗಳ ಜತೆ ಸಮಯ ಕಳೆಯುವ ಅವಕಾಶ. ಆರ್ಥಿಕ ಕೊರತೆ ನಿವಾರಣೆ. ಹಣದ ನೆರವು ಒದಗುವುದು. ಕೌಟುಂಬಿಕ ನೆಮ್ಮದಿ.

ಕುಂಭ
ಎಲ್ಲರೊಂದಿಗೆ ಹೊಂದಾಣಿಕೆಯ ದಿನ. ಹಾಗಾಗಿ ಬಿಕ್ಕಟ್ಟು, ಸಂಘರ್ಷಗಳು ಉಂಟಾಗಲಾರದು. ಆರ್ಥಿಕ ಕೊರತೆ ತುಸು ಕಾಡಬಹುದು.

ಮೀನ
ಕುಟುಂಬಸ್ಥರ ಜತೆ ಸಂಘರ್ಷ ಉಂಟಾದರೂ ಶೀಘ್ರ ಎಲ್ಲವೂ ಸಮಸ್ಥಿತಿಗೆ ಬರುವುದು. ಸಂಯಮದಿಂದ ವರ್ತಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!