October 17, 2026
Saturday, October 17, 2026
spot_img

ಲೇಟ್ ಆದ್ರೂ ಪರವಾಗಿಲ್ಲ….ಕೊನೆಗೂ ವಿಶ್ ಮಾಡಿದ ತ್ರಿಶಾ: ಎಲ್ಲಾ ಊಹಾಪೋಹಗಳಿಗೆ ಬ್ರೇಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಹಾಗೂ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ 52ನೇ ಜನ್ಮದಿನದ ಸಂಭ್ರಮದ ನಡುವೆ ನಟಿ ತ್ರಿಶಾ ಕೃಷ್ಣನ್ ಅವರ ಮೌನ ಹಲವು ಚರ್ಚೆಗಳಿಗೆ ಕಾರಣವಾಗಿತ್ತು. ಆದರೆ ತಡವಾಗಿ ಹಂಚಿಕೊಂಡ ಒಂದು ವಿಶೇಷ ಪೋಸ್ಟ್ ಈಗ ಎಲ್ಲ ವದಂತಿಗಳಿಗೆ ತೆರೆ ಎಳೆದಿದೆ.

ವೈರಲ್ ಆದ ವಿಶೇಷ ಫೋಟೋ

ತ್ರಿಶಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಜಯ್ ಜೊತೆ ಕೇಕ್ ಕತ್ತರಿಸುವ ಅಪರೂಪದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ವಿಜಯ್ ಕೇಕ್ ಕತ್ತರಿಸುತ್ತಿದ್ದರೆ, ತ್ರಿಶಾ ಅವರು ಸಂತಸದಿಂದ ಅವರನ್ನು ನೋಡುವ ದೃಶ್ಯ ಅಭಿಮಾನಿಗಳ ಗಮನ ಸೆಳೆದಿದೆ.

ಇದನ್ನೂ ಓದಿ:

ಪ್ರೀತಿಯ ಕ್ಯಾಪ್ಷನ್

“ಎಲ್ಲದಕ್ಕೂ ವಿಶೇಷ ಅರ್ಥ ತಂದುಕೊಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು” ಎಂದು ಬರೆದು ತ್ರಿಶಾ ಶುಭ ಕೋರಿದ್ದಾರೆ. ಈ ಪೋಸ್ಟ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.

ವದಂತಿಗಳಿಗೆ ಬ್ರೇಕ್

ಇತ್ತೀಚೆಗೆ ಇಬ್ಬರ ನಡುವೆ ಅಸಮಾಧಾನ ಉಂಟಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ತ್ರಿಶಾ ವಿಜಯ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅನ್‌ಫಾಲೋ ಮಾಡಿದ್ದಾರೆ ಎನ್ನುವ ಮಾತುಗಳೂ ಕೇಳಿಬಂದಿದ್ದವು. ಆದರೆ ಈ ಪೋಸ್ಟ್ ಮೂಲಕ ಇಬ್ಬರ ಸ್ನೇಹದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂಬುದು ಸ್ಪಷ್ಟವಾಗಿದೆ.

Must Read