ನನ್ನ ಪ್ರಾಣ ಹೋದ್ರೂ ಪರ್ವಾಗಿಲ್ಲ, ಫಯಾಜ್‌ ಪ್ರಾಣ ತೆಗೀತಿನಿ: ನೇಹಾ ತಂದೆ ಹಿರೇಮಠ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನನ್ನ ಪ್ರಾಣ ಹೋದರೂ ಪರವಾಗಿಲ್ಲ, ಫಯಾಜ್‌ ಪ್ರಾಣ ತೆಗೀತಿನಿ, ನನ್ನ ಮಗಳ ಹೆಣದ ಮೇಲೆ ಪ್ರಮಾಣ ಮಾಡಿದ್ದೇನೆ ಎಂದು ನೇಹಾ ತಂದೆ ನಿರಂಜನ ಹಿರೇಮಠ ಹೇಳಿದ್ದಾರೆ.

ಆತ ಪ್ಲಾನ್‌ ಮಾಡಿ ಮಗಳನ್ನು ಕೊಂದಿದ್ದಾನೆ. ಆರೋಪಿ ಫಯಾಜ್​ಗೆ ಸಹಾಯ‌ ಮಾಡಿದವರನ್ನೂ ಬಂಧಿಸಬೇಕು ಎಂದು ನಿರಂಜನ ಹಿರೇಮಠ ಆಗ್ರಹಿಸಿದ್ದಾರೆ.

ಎಲ್ಲ ವಿಷಯಗಳನ್ನು ಸಿಐಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ನಿನ್ನೆ ಫಯಾಜ್​ನನ್ನು ಮಹಜರು ಮಾಡಿರುವ ಬಗ್ಗೆಯೂ ಅವರು ತಿಳಿಸಿದರು. ಹಂತಕ ಫಯಾಜ್ ನನ್ನ ಮಗಳನ್ನು ಕಿಡ್ನ್ಯಾಪ್ ಮಾಡಲು ಯತ್ನಿಸಿದ್ದ.

ಕೆಲ ದಿನಗಳಿಂದ ನಮಗೆ ಬೆದರಿಕೆ ಇದೆ. ಯಾರೋ ಮನೆಗೆ ಬಂದು ವಿಡಿಯೋ ಮಾಡುತ್ತಿದ್ದಾರೆ. ಕೆಲ ದಿನಗಳಿಂದ ಅನಾಮಿಕರು ಮನೆ ಸುತ್ತಮುತ್ತ ಒಡಾಡುತ್ತಿದ್ದಾರೆ. ಇದನ್ನು ಸಿಐಡಿ ಅಧಿಕಾರಿಗಳ ಗಮನಕ್ಕೂ ತಂದಿದ್ದೇನೆ‌ ಎಂದು ನಿರಂಜನ ಹಿರೇಮಠ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!