Friday, June 2, 2023

Latest Posts

ಮನೆ ಬಾಡಿಗೆ ಪಡೆದ ವ್ಯಕ್ತಿ ನಾಪತ್ತೆ, ಬಾಗಿಲು ತೆರೆದ ಮಾಲೀಕನಿಗೆ ಕಾದಿತ್ತು ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಂಗಳೂರಿನಲ್ಲಿ ಬಾಡಿಗೆಗೆ ಮನೆ ಸಿಗುವುದು ಸುಲಭದ ಮಾತಲ್ಲ. ಅಂಥದ್ದರಲ್ಲಿ ಸಿಕ್ಕ ಮನೆಯಲ್ಲಿ ಹಾಯಾಗಿರದೆ ಐಟಿ ಉದ್ಯೋಗಿಯೊಬ್ಬರು ನಾಪತ್ತೆಯಾಗಿದ್ದಾರೆ. ಅನುಮಾನಗೊಂಡ ಮಾಲೀಕರು ಬಾಗಿಲು ತೆರೆದು ನೋಡಿದಾಗ ಅವರಿಗೆ ಶಾಕ್ ಕಾದಿತ್ತು.

ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು 4 ತಿಂಗಳ ಬಾಡಿಗೆ ಮುಂಗಡ ಪಾವತಿಸಿ ಮನೆ ಬಾಡಿಗೆ ಪಡೆದು ಆ ಬಳಿಕ ನಾಪತ್ತೆಯಾಗಿದ್ದರು. ನಂತರ ಮಾಲೀಕರಿಗೆ ಕರೆ ಮಾಡಿ ತಾನು ಪಾವತಿಸಿದ್ದ ಅಡ್ವಾನ್ಸ್‌ ಹಣ ವಾಪಸ್ ನೀಡುವಂತೆ ಕೇಳಿದ್ದಾನೆ. ಆದರೆ ಮಾಲೀಕರು ತಮ್ಮ ನಿವೇಶನವನ್ನು ತೆರವು ಮಾಡಿ ಹಸ್ತಾಂತರಿಸುವಂತೆ ಒತ್ತಾಯಿಸಿದರು. ನಿವೇಶನ ತೆರವು ಮಾಡಲು ತಡ ಮಾಡಿದ್ದರಿಂದ ಮಾಲೀಕರು ಅನುಮಾನಗೊಂಡು ಬಾಗಿಲು ತೆರೆದ ಕೂಡಲೇ ಆಘಾತಕಾರಿ ದೃಶ್ಯ ಕಣ್ಣಿಗೆ ಬಿದ್ದಿದೆ.

ತೆರೆದ ಕಿಟಕಿಗಳು, ಪಾರಿವಾಳಗಳು ಮನೆಗೆ ಹಾನಿ ಮಾಡಿವೆ. ಎಲ್ಲೆಂದರಲ್ಲಿ ಕುಡಿದ ಬಾಟಲಿಗಳು ತುಂಬಿವೆ. ಮನೆ ಕಸದ ತೊಟ್ಟಿಯಂತೆ ಕಂಡಿದೆ. ಈ ವಿಷಯವನ್ನು ರವಿ ಹಂಡಾ ಎಂಬ ವ್ಯಕ್ತಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದಕ್ಕಾಗಿಯೇ ಮಾಲೀಕರು ಬ್ಯಾಚುಲರ್‌ಗಳಿಗೆ ಬಾಡಿಗೆ ನೀಡಲು ಬಯಸುವುದಿಲ್ಲ… ಬೆಂಗಳೂರಿನ ದೊಡ್ಡ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ವಿದ್ಯಾವಂತರು ಮನೆಯನ್ನು ಹೀಗೆ ಇಟ್ಟುಕೊಳ್ಳತ್ತಾರಾ ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಈ ಪೋಸ್ಟ್ ನೋಡಿದ ಕೆಲವರು ‘ಮಾಲೀಕರ ಠೇವಣಿ ಹಿಂತಿರುಗಿಸದೆ ಮನೆಯನ್ನು ಸ್ವಚ್ಛಗೊಳಿಸಿ’ ಎಂದು ಸಲಹೆ ನೀಡಿದರು. ಮನೆ ಹುಡುಕುವುದೇ ಕಷ್ಟವಾಗಿರುವಾಗ ಇಂತಹ ಕೆಲಸಗಳನ್ನು ಮಾಡಿದರೆ ಬ್ಯಾಚುಲರ್ ಗಳಿಗೆ ಬೆಂಗಳೂರಿನಲ್ಲಿ ಮನೆ ಸಿಗುವುದು ಕಷ್ಟ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!