‘ಇನ್ಫೋಸಿಸ್’ ಬ್ರಾಂಡ್ ಅಂಬಾಸಿಡರ್ ಆಗಿ ಟೆನಿಸ್ ದಂತಕಥೆ ‘ರಾಫೆಲ್ ನಡಾಲ್’ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೆನಿಸ್ ದಂತಕಥೆ ರಾಫೆಲ್ ನಡಾಲ್ ಅವರು ಇನ್ಫೋಸಿಸ್ ನ ಡಿಜಿಟಲ್ ಇನ್ನೋವೇಶನ್ ಬ್ರಾಂಡ್ ಅಂಬಾಸಿಡರ್ ಆಗಲಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.  ಈ ಸಹಭಾಗಿತ್ವ ಟೆನಿಸ್ ದಂತಕಥೆ ನಡಾಲ್ ಅವರ ‘ಡಿಜಿಟಲ್ ಸೇವೆಗಳ ಕಂಪನಿಯೊಂದಿಗೆ ಮೊದಲ ಸಹಯೋಗ’ ಎಂದು ಕಂಪನಿ ಪ್ರಕಟಣೆಯಲ್ಲಿ ಬಹಿರಂಗಪಡಿಸಿದೆ.

ಇನ್ಫೋಸಿಸ್ ಮತ್ತು ನಡಾಲ್ ಅವರ ಕೋಚಿಂಗ್ ತಂಡವು ಸಹಭಾಗಿತ್ವದ ಭಾಗವಾಗಿ “ಎಐ-ಚಾಲಿತ ಪಂದ್ಯ ವಿಶ್ಲೇಷಣೆ ಸಾಧನ” ವನ್ನು ಅಭಿವೃದ್ಧಿಪಡಿಸಲಿದೆ. ಈ ಉಪಕರಣವು ನಡಾಲ್ ಅವರ ಕೋಚಿಂಗ್ ತಂಡಕ್ಕೆ ಆಟಗಾರರ ಲೈವ್ ಪಂದ್ಯಗಳ ಮೇಲೆ ನಿಗಾ ಇಡಲು ಮತ್ತು ಆಟದಿಂದ ಅಮೂಲ್ಯವಾದ ಒಳನೋಟಗಳನ್ನು ಪಡೆಯಲು ಸಹಾಯ ಮಾಡುತ್ತದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!