ಚಂದ್ರನ ಮೇಲೆ ಸಲ್ಫರ್ ಇರುವುದು ಪಕ್ಕಾ: ಮಾಹಿತಿ ಹಂಚಿಕೊಂಡ ಪ್ರಜ್ಞಾನ್ ರೋವರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರನ ಮೇಲೆ ಕಾರ್ಯಾಚರಣೆ ಶುರು ಮಾಡಿರುವ ಪ್ರಜ್ಞಾನ್ ರೋವರ್ ನ ಇಂದು ಸಲ್ಫರ್ ಇರುವುದನ್ನು ದೃಢಪಡಿಸಿದೆ.

ವಿಭಿನ್ನ ತಂತ್ರ ಬಳಸಿಕೊಂಡು ಸಲ್ಫರ್ ಇರುವಿಕೆಯನ್ನು ವಿಭಿನ್ನ ಪ್ರಜ್ಞಾನ್ ಪತ್ತೆ ಮಾಡಿರುವುದಾಗಿ ಇಸ್ರೋ ಹೇಳಿದೆ.
ಪ್ರಜ್ಞಾನ್ ರೋವರ್ ನಲ್ಲಿರುವ ಆಫಾ ಪಾರ್ಟಿಕಲ್ ಎಕ್ಸ್-ರೇ ಸ್ಪೆಕ್ಟ್ರೋಸ್ಕೋಪ್ (ಎಪಿಎಕ್ಸ್ ಎಸ್) ಚಂದ್ರನ ಮೇಲ್ಮೈ ನಲ್ಲಿ ಸಲ್ಫರ್ ಅಸ್ತಿತ್ವವನ್ನು ಹಾಗೂ ಇನ್ನಿತರ ಸಣ್ಣ ಅಂಶಗಳನ್ನು ಪತ್ತೆ ಮಾಡಿರುವುದಾಗಿ ಇಸ್ರೋ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದೆ.

‘ಚಂದ್ರಯಾನ-3 ರ ಈ ಸಂಶೋಧನೆಯು ಆ ಪ್ರದೇಶದಲ್ಲಿ ಸಲ್ಫರ್ (S) ಮೂಲಕ್ಕೆ ತಾಜಾ ವಿವರಣೆಯನ್ನು ಅಭಿವೃದ್ಧಿಪಡಿಸಲು ವಿಜ್ಞಾನಿಗಳಿಗೆ ದಾರಿಮಾಡಿಕೊಡುತ್ತದೆ ಎಂದು ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!