ಭಾರತದಲ್ಲಿ ಲ್ಯಾಪ್‌ಟಾಪ್‌ ತಯಾರಿಸಲು ಬಂತು ಬರೋಬ್ಬರಿ 32 ಕಂಪನಿಗಳ ಅರ್ಜಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭಾರತದಲ್ಲಿ (India) 32 ಕಂಪನಿಗಳು ಲ್ಯಾಪ್‌ಟಾಪ್‌ (Laptop) ತಯಾರಿಸಲು ಅರ್ಜಿ ಸಲ್ಲಿಸಿವೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಖಾತೆಯ ಸಚಿವ ಅಶ್ವಿನಿ ವೈಷ್ಣವ್‌ (Ashwini Vaishnav) ಹೇಳಿದ್ದಾರೆ.

ಐಟಿ ಹಾರ್ಡ್‌ವೇರ್‌ಗಾಗಿ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ 2.0 ಗಾಗಿ 32 ಅರ್ಜಿ ಸ್ವೀಕರಿಸಲಾಗಿದೆ. ಇವುಗಳಲ್ಲಿ 25 ದೇಶೀಯ ಕಂಪನಿಗಳಾಗಿವೆ ಎಂದು ಮಾಹಿತಿ ನೀಡಿದರು.

ನವೆಂಬರ್‌ನಿಂದ ಚೀನಿ ಲ್ಯಾಪ್‌ಟಾಪ್ (Chini Laptop) ಆಮದುಗಳ ಮೇಲಿನ ನಿರ್ಬಂಧಗಳನ್ನು ಘೋಷಿಸಿದ ಬಳಿಕ ಈ ಮಹತ್ತರ ಬದಲಾವಣೆಯಾಗಿದೆ.

ಹೆಚ್‌ಪಿ, ಡೆಲ್‌, ಲೆನೊವೊ, ಥಾಂಪ್ಸನ್, ಏಸರ್ ಮತ್ತು ಏಸಸ್‌ನಂತಹ ಕಂಪನಿಗಳು ಈ ಯೋಜನೆಯಡಿ ಲ್ಯಾಪ್‌ಟಾಪ್‌ಗಳನ್ನು ತಯಾರಿಸಲಿವೆ. ಹೆಚ್‌ಪಿ, ವಿವಿಡಿಎನ್‌, ಲೆನೊವೊ ಸರ್ವರ್‌ಗಳನ್ನು ತಯಾರಿಸಲಿವೆ.

ಇನ್ನು ಆಪಲ್‌ (Apple) ಕಂಪನಿ ಪಿಎಲ್‌ಐ ವ್ಯಾಪ್ತಿಗೆ ಸೇರಲು ಅರ್ಜಿ ಸಲ್ಲಿಸಿಲ್ಲ. ಈಗಾಗಲೇ ಸಾಧನಗಳನ್ನು ಆಪಲ್‌ ತಯಾರಿಸುತ್ತಿದೆ ಎಂದು ಹೇಳಿದರು.

ಇದರಿಂದ 3.35 ಲಕ್ಷ ಕೋಟಿ ರೂ. ಉತ್ಪಾದನೆ ನಿರೀಕ್ಷೆ ಇದ್ದು, ಸುಮಾರು 75 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ನೋಯ್ಡಾದಲ್ಲಿ ಮುಂದೆ ಡಿಕ್ಸನ್ ಕಾರ್ಖಾನೆಯ 25 ಸಾವಿರ ಮಂದಿಗೆ ಉದ್ಯೋಗ ನೀಡಲಿದೆ ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!