ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಜಾಬ್-ಕೇಸರಿ ಸಂಘರ್ಷ ಹೆಚ್ಚಾಗಿದ್ದು, ಎಲ್ಲೆಡೆ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ.
ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಿ ವಿದ್ಯಾಭ್ಯಾಸ ಮಾಡುವ ಈ ಸಮಯದಲ್ಲಿ ಈ ರೀತಿ ವಿವಾದದಿಂದ ಸರ್ಕಾರ ರಜೆ ಘೋಷಣೆ ಮಾಡುವಂತಾಗಿದೆ. ಯುವ ಪೀಳಿಗೆ ವಿವಾದಕ್ಕೆ ಸಿಲುಕಿರುವ ಬಗ್ಗೆ ನಟಿ ರಮ್ಯಾ ಬೇಸರ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಧರಿಸಿರುವ ವಿದ್ಯಾರ್ಥಿನಿಯರು ಹಾಗೂ ಕೇಸರಿ ಶಾಲು ಧರಿಸಿದ ವಿದ್ಯಾರ್ಥಿಗಳು ಸಂಘರ್ಷಕ್ಕೆ ಇಳಿದಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ದೇಶದ ಯುವಕರು ಈ ರೀತಿ ಎರಡು ಭಾಗ ಆಗುತ್ತಿರುವುದನ್ನು ನೋಡಲು ಬೇಸರವಾಗುತ್ತಿದೆ ಎಂದಿದ್ದಾರೆ.
Makes me so sad to see the youth of India divided- pic.twitter.com/eOpFsNjuFl
— Divya Spandana/Ramya (@divyaspandana) February 9, 2022