ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರಿನಲ್ಲಿ ಕುಕ್ಕರ್ ಬಾಂಬ್ ಬ್ಲಾಸ್ಟ್ ನಡೆದ ಬಳಿಕ ಕರಾವಳಿ ಭಾಗದಲ್ಲಿ ಉಗ್ರರ ಕರಿನೆರಳಿನ ಬಗ್ಗೆ ಆತಂಕ ಹೆಚ್ಚಾಗಿದೆ. ಉಡುಪಿ ಜಿಲ್ಲೆಯಲ್ಲಿ ತುರಾಯು ಸ್ಯಾಟಲೈಟ್ ಕರೆ ಬಂದಿರುವ ಬಗ್ಗೆ ರಾಜ್ಯ ಆಂತರಿಕ ಭದ್ರತಾ ವಿಭಾಗವು ಜಿಲ್ಲಾ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿಯನ್ನು ನೀಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಉಡುಪಿ ಜಿಲ್ಲೆಯ ಮಂದಾರ್ತಿ ದೇವಸ್ಥಾನದಿಂದ ಸುಮಾರು ಎರಡು ಕಿ.ಮೀ. ದೂರದಲ್ಲಿರುವ ಕ್ಯಾಶ್ಯೂ ಫ್ಯಾಕ್ಟರಿಯ ಬಳಿ ತುರಾಯು ಸ್ಯಾಟಲೈಟ್ ಕರೆಯು ಆಪರೇಟ್ ಆಗಿರುವ ಬಗ್ಗೆ ಆಂತರಿಕ ಭದ್ರತಾ ವಿಭಾಗಕ್ಕೆ ನ.9 ರಂದು ಮಾಹಿತಿ ಲಭಿಸಿತ್ತು ಎನ್ನಲಾಗಿದೆ.
2020ರಲ್ಲೂ ಕೇಳಿಬಂದಿತ್ತು ಸ್ಯಾಟಲೈಟ್ ಸದ್ದು:
2020ರಲ್ಲಿ ಉಡುಪಿ ಜಿಲ್ಲೆಯ ಕೊಲ್ಲೂರು, ಜಡ್ಡಿನಗುಡ್ಡೆ, ಹೆರ್ಮುಂಡೆ ಭಾಗದಲ್ಲೂ ತುರಾಯು ಸ್ಯಾಟಲೈಟ್ ಆಪರೇಟ್ ಆಗಿರುವ ಬಗ್ಗೆ ಆಂತರಿಕ ಭದ್ರತಾ ವಿಭಾಗಕ್ಕೆ ಮಾಹಿತಿ ಲಭಿಸಿತ್ತು. ಈ ಬಗ್ಗೆ ತನಿಖೆಯೂ ನಡೆದಿತ್ತು.