ಹೊಸದಿಗಂತ ವರದಿ ಹುಬ್ಬಳ್ಳಿ:
ದೆಹಲಿಯಲ್ಲಿ ವಿವಿಧ ಬೇಡಿಕೆ ಈಡೇರಿಸಲು ರೈತರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕುವ ಕೆಲಸ ಬಿಜೆಪಿ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ಬುಧವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ಕೃಷಿ ಸಚಿವ ಮುಂಡಾ ಅವರು ರೈತರ ಸಂಘಟನೆ ಜೊತೆ ಮಾತನಾಡಿದ್ದಾರೆ. ರೈತರು ಹೊಸ ಬೇಡಿಕೆ ಇಟ್ಟಿದ್ದು, ನಮ್ಮ ಸರ್ಕಾರ ಸಹಾನಭೂತಿಯಿಂದ ರೈತರ ಬೇಡಿಕೆ ಪರಿಶೀಲನೆ ಮಾಡುತ್ತಿದೆ ಎಂದರು.
ಪ್ರತಿಭಟನೆಯಲ್ಲಿ ಕಲ್ಲು ಹೊಡೆಯುತ್ತಿರುವವರು ರೈತರಲ್ಲ. ಅನುಮತಿ ಪಡೆಯದೆ ಬರುವವರನ್ನು ತಡೆಯಲಾಗುತ್ತಿದೆ. ರೈತರು ತಮ್ಮ ಬೇಡಿಕೆಗಳ ಬಗ್ಗೆ ಚರ್ಚೆಗೆ ಬರಬೇಕು. ರೈತರೊಂದಿಗೆ ನಾವು ಸಹಾನುಭೂತಿ ನಡೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆದಿದೆ. ನನ್ನ ಗೆಲುವು ಖಚಿತ. ಜೆಡಿಎಸ್ ಬಿಜೆಪಿ ಸೀಟು ಹಂಚಿಕೆ ಯಾವುದು ಚರ್ಚೆಯಾಗಿಲ್ಲ. ಈಗ ಮಾತಾಡೋದು ಕೇವಲ ಉಹಾಪೋಹ ಅಷ್ಟೆ. ರಾಷ್ಟ್ರೀಯ ಕಾರ್ಯಕಾರಿಣಿ ಬಳಿಕ ಎಲ್ಲವೂ ಅಂತಿಮವಾಗಲಿದೆ. ಒಂದು ಹಂತದಲ್ಲಿ ಕೇಂದ್ರದಲ್ಲಿ ಚರ್ಚೆ ನಡೀತಿದೆ. ಅದೆಲ್ಲವೂ ಅಪೂರ್ಣ ಆಗಿದೆ. ಕಾರ್ಯಕಾರಿಣಿ ನಂತರವೇ ಎಲ್ಲವೂ ಅಂತಿಮವಾಗಲಿದೆ ಎಂದರು.