ಜಾತಿಯಿಂದ ಬ್ರಾಹ್ಮಣನಾದರೆ ಸಾಲದು, ಗುಣದಿಂದ ಬ್ರಾಹ್ಮಣರಾಗಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ

ಹೊಸದಿಗಂತ ವರದಿ,ಕಲಬುರಗಿ:

ಜಾತಿಯಿಂದ ಬ್ರಾಹ್ಮಣನಾದರೆ ಸಾಲದು ಗುಣದಿಂದ ಬ್ರಾಹಣರಾಗಬೇಕು ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ವಿಪ್ರಸಮಾಜಕ್ಕೆ ಸಲಹೆ ನೀಡಿದರು.

ನಗರದ ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯಿಂದ ಭಾನುವಾರ ಆಯೋಜಿಸಿದ್ದ ವಿಪ್ರ ಪ್ರತಿಭೋಥ್ಸವ ಉದ್ಘಾಟಿಸಿ, ಸನಾತನ ಕಾಲದಿಂದಲೂ ವಿಪ್ರರು ಗುಣದಿಂದ ಬ್ರಾಹ್ಮರನ್ನು ಗುರುತಿಸವತ್ತ ಬಂದಿದ್ದಾರೆ. ರಾಮಾಯಣ ರಚಿಸಿದ ವಾಲ್ಮೀಕಿ, ರಾಮ ಬ್ರಾಹ್ಣರಲ್ಲ. ಆದರೂ, ನಾವು ಅವರನ್ನು ಪೂಜಿಸುತ್ತೇವೆ. ರಾವಣ ಬ್ರಾಹ್ಮಣರಾದರೂ ನಾವು ಆತನನ್ನು ಪೂಜಿಸುವುದಿಲ್ಲ. ಗುಣದಿಂದ ಗುರಿತಿಸುವ ಸ್ವಭಾವ ನಮ್ಮಿರುವುದಕ್ಕೆ ಇದು ಉದಾರಣೆ ಎಂದರು.

ಒಬ್ಬರ ಮೇಲೆ ಬೆಳಕು ಬಿಟ್ಟು ಇನ್ನೋಬ್ಬರ ಮೇಲೆ ಕತ್ತಲೆ ಹಾಕಬಾರದು. ಎಲ್ಲರನ್ನು ಬೆಳಕಿನಡೆಗೆ ಕರೆದುಕೊಂಡು ಹೋಗಿವುದೇ ಬ್ರಾಹ್ಮಣ ಸಮಾಜದ ಧರ್ಮ ಎಂದರು.

ಭಾರತದ ಆರ್ಥಿಕ ಸ್ಥಿತಿ ಸುಭದ್ರವಾಗಿದೆ. ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿ ಭಾರತವಿದೆ. ಮೋದಿ ಪ್ರಧಾನಿಯಾದ ನಂತ ಭಾರತ ವಿರ್ಶವದಲ್ಲಿ ಅಗ್ರಗಣ್ಯ ಸ್ಥಾನ ಪಡೆದುಕೊಳ್ಳುತ್ತಿದೆ. ಆರ್ಥಿಕ ಸ್ಥಿತಿಯಲ್ಲಿ ನಾವು ಇಂಗ್ಲೆಂಡನ್ನು ಹಿಂದಿಕ್ಕಿ ಮುಂದೆ ಬಂದಿದ್ದೇವೆ. ಹಾವಾಡಿಗರ ದೇಶ ಎಂದು ಅವಹೇಳನ ಮಾಡಿದ ದೇಶವನ್ನೆ ನಾವು ಹಿಂದಕ್ಕೆ ಹಾಕಿ ಮುಂದೆ ಬಂದಿದೇವೆ ಇದು ಹೆಮ್ಮೆಯ ವಿಷಯ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!