ಹೊಸದಿಗಂತ ಡಿಜಿಟಲ್ ಡೆಸ್ಕ್:
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸೋತ ಬಳಿಕ ಕಾಣೆಯಾದಂತಿದ್ದ ನಿಖಿಲ್ ಕುಮಾರಸ್ವಾಮಿ ಒಂದು ವಾರದ ನಂತರ ಅರಕೂಲಗೂಡು ತಾಲ್ಲೂಕಿನ ರಾಮನಾಥಪುರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡಿದ್ದಾರೆ.
ಸೋತಿದ್ದೇನೆ ಅಂತ ಕೈಕಟ್ಟಿ ಮನೆಯಲ್ಲಿ ಕೂರುವ ಜಾಯಮಾನ ತನ್ನದಲ್ಲ, ದೇವೇಗೌಡರು ಕಟ್ಟಿದ ಜೆಡಿಎಸ್ ಪಕ್ಷ ಇವತ್ತು ಸಂಕಷ್ಟದಲ್ಲಿದ್ದಾಗ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ, ಪಕ್ಷವನ್ನು ದಡ ಮುಟ್ಟಿಸುವ ಕೆಲಸ ಮಾಡೋದಾಗಿ ನಿಖಿಲ್ ಹೇಳಿದ್ದಾರೆ.