ಹೊಸದಿಗಂತ ವರದಿ, ಮಂಗಳೂರು:
ವಿಜ್ಞಾನ ಅಥವಾ ತಂತ್ರಜ್ಞಾನವನ್ನು ವಿಕಾಸಕ್ಕಾಗಿ ಉಪಯೋಗಿಸಬೇಕೇ ಹೊರತು, ಧಾರ್ಮಿಕ ಆಚರಣೆಯಲ್ಲೂ ರಾಜಕೀಯ ಮಾಡುವುದು ಸರಿಯಲ್ಲ ಎಂದು ನಟ ಪ್ರಕಾಶ್ ರೈ ಹೇಳಿದರು.
ಮಂಗಳೂರಿನಲ್ಲಿ ಶನಿವಾರ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ನಾನು ಕುಂಭ ಮೇಳಕ್ಕೆ ಹೋಗದಿರುವುದು ನನ್ನ ನಂಬಿಕೆಯ ವಿಚಾರ. ನಾನು ಧರ್ಮ ವಿರೋಧಿಯಲ್ಲ. ಆದರೆ ನನ್ನ ನಂಬಿಕೆಯನ್ನು ಎಐ ತಂತ್ರಜ್ಞಾನ ಬಳಸಿಕೊಂಡು ಧಾರ್ಮಿಕ ವಿಚಾರದಲ್ಲೂ ರಾಜಕಾರಣ ಮಾಡುವವರು ನಿಜವಾದ ಹಿಂದುಗಳಲ್ಲ ಎಂದರು.
ಕುಂಭ ಮೇಳಕ್ಕೆ ಹೋಗುವುದು ಅವರವರ ನಂಬಿಕೆ. ಆದರೆ ನಾನು ಹೋಗದ್ದನ್ನೇ ವಿಚಾರವಾಗಿಸಿ, ಒಬ್ಬ ವ್ಯಕ್ತಿಯ ಇಚ್ಛೆಗೆ ವಿರುದ್ಧವಾಗಿ ಆತನ ಫೊಟೋವನ್ನು ದುರ್ಬಳಕೆ ಮಾಡಿಕೊಂಡು ಎಐ ನಂತಹ ತಂತ್ರಜ್ಞಾನವನ್ನು ದುರ್ಬಳಕೆ ಮಾಡುವುದು ಅಕ್ಷಮ್ಯ ಅಪರಾಧ ಎಂದರು.
ದೆಹಲಿಯಲ್ಲಿ ಆಪ್‌ಗೆ ಗೆಲ್ಲಲು ಅವಕಾಶ ಇತ್ತು. ಆದರೂ ಜನ ಸೋಲಿಸಿzರೆ ಅಂದರೆ, ಜನ ಬೇಸತ್ತಿದ್ಧಾರೆ ಎಂದರ್ಥ. ಅದನ್ನ ಒಪ್ಪಿಕೊಳ್ಳಲೇಬೇಕು. ಒಳ್ಳೆಯ ಕೆಲಸ ಮಾಡಿದ ತಕ್ಷಣ ದೇಶದಲ್ಲಿ ಅವರೇ ಗೆಲ್ಲುತ್ತಾರೆ ಎಂಬ ಖಾತರಿ ಇಲ್ಲ. ಕಳೆದ ಮೂರು ವರ್ಷಗಳ ಕಾಲ ಅವರಿಗೆ ಸರಿಯಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿಲ್ಲ ಎಂಬ ಆಪ್‌ನ ಮಾತುಗಳಲ್ಲೂ ಸತ್ಯವಿದೆ ಎಂದು ಪ್ರಕಾಶ್ ರೈ ಹೇಳಿದರು.