ಋತುಮತಿಯಾದ ಮಹಿಳೆ ದೇವಸ್ಥಾನ ಪ್ರವೇಶಿಸಿದರೆ ತಪ್ಪಿಲ್ಲ: ವಿವಾದದ ಕಿಡಿ ಹಚ್ಚಿದ ನಟಿ ಐಶ್ವರ್ಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಹಿಂದು ಸಂಪ್ರದಾಯದಲ್ಲಿ ಋತುಮತಿಯಾದರು (menstruation) ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವುದಿಲ್ಲ, ದೇವಸ್ಥಾನದೊಳಗೆ ಪ್ರವೇಶಿಸುವುದಿಲ್ಲ.

ಈ ಸಂಪ್ರದಾಯವನ್ನು ಬಹುತೇಕ ಮಹಿಳೆಯರು ಅನುಸರಿಕೊಂಡು ಬರುತ್ತಿದ್ದಾರೆ. ಆದರೆ ಇದರ ಬಗ್ಗೆ ಕೆಲವರ ವಿರೋಧವೂ ವ್ಯಕ್ತಪಡಿಸಿದ್ದಾರೆ ಕೂಡ.

ಇದೀಗ ಈಗ ಇದೇ ವಿಷಯವನ್ನು ನಟಿಯೊಬ್ಬಳು ಹೇಳಿದ್ದು, ಆಸ್ತಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಣ್ಣ, ತಿಟ್ಟಂ ಇರಂಡು, ವಡ ಚೆನ್ನೈ, ಜಮುನಾ ಡ್ರೈವರ್ ಚಿತ್ರಗಳ ಮೂಲಕ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿರುವ ನಟಿ ರಾಜೇಶ್ (Aishwarya Rajesh) ಅವರು ನೀಡಿದ್ದ ಹೇಳಿಕೆ ವಿವಾದಕ್ಕೂ ಎಡೆ ಮಾಡಿಕೊಟ್ಟಿದೆ.

‘ಗ್ರೇಟ್ ಇಂಡಿಯನ್ ಕಿಚನ್’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಭಾಗಿಯಾದ ನಟಿ ಮುಟ್ಟಿನ ಬಗ್ಗೆ ಹೇಳಿಕೆ ನೀಡಿದ್ದಾರೆ.
‘ಯಾರು ದೇವಾಲಯದ (temple) ಆವರಣವನ್ನು ಪ್ರವೇಶಿಸಬಹುದು ಅಥವಾ ಪ್ರವೇಶಿಸಬಾರದು ಎಂಬ ಬಗ್ಗೆ ದೇವರು ಜನರಿಗೆ ತಾರತಮ್ಯ ಮಾಡುವುದಿಲ್ಲ. ಋತುಮತಿಯಾದ ಮಹಿಳೆಯರು ಪವಿತ್ರ ಸ್ಥಳವನ್ನು ಪ್ರವೇಶಿಸಿದರೆ ಯಾವುದೇ ದೇವರು ಅಥವಾ ದೇವತೆಗಳು ಅಸಮಾಧಾನಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ವೇಳೆ ಶಬರಿಮಲೆ ಕುರಿತು ಮಾತನಾಡಿದ ನಟಿ, ಶಬರಿಮಲೆಗೆ ಮುಟ್ಟಾಗುವ ಮಹಿಳೆಯರು ಪ್ರವೇಶಿಸಿದರೆ ತಪ್ಪಿಲ್ಲ. ದೇವರು ಎಲ್ಲರಿಗೂ ಒಂದೇ ರೀತಿ. ದೇವರ ದೃಷ್ಟಿಯಲ್ಲಿ ಸ್ತ್ರೀಪುರುಷರ ಭೇದವಿಲ್ಲ. ದೇವಸ್ಥಾನದ ಆವರಣವನ್ನು ಪ್ರವೇಶಿಸಬಹುದಾದವರು ಮತ್ತು ಪ್ರವೇಶಿಸಲಾಗದವರು ಎಂಬ ಭೇದಭಾವವನ್ನು ದೇವರು ತೋರಿಸುವುದಿಲ್ಲ. ಇದು ಕೇವಲ ಮಾನವ ನಿರ್ಮಿತ ಕಾನೂನುಗಳು (Laws). ಯಾವುದೇ ದೇವಾಲಯದಲ್ಲಿರುವ ಯಾವುದೇ ದೇವರು ಕೂಡ ಪವಿತ್ರ ಸ್ಥಳವನ್ನು ಪ್ರವೇಶಿಸುವ ಭಕ್ತರ ಬಗ್ಗೆ ಅಸಮಾಧಾನಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಅದೇ ರೀತಿ ಮಾಂಸ (Non Veg) ತಿಂದು ದೇವಸ್ಥಾನಕ್ಕೆ ಹೋಗುವ ಕುರಿತು ಮಾತನಾಡಿರುವ ನಟಿ, ಏನು ತಿನ್ನಬೇಕು, ತಿನ್ನಬಾರದು ಎಂದು ದೇವರು ಹೇಳುವುದಿಲ್ಲ. ಒಬ್ಬ ಭಕ್ತ ಪರಿಶುದ್ಧನಾಗಿರಲಿ ಅಥವಾ ಪರಿಶುದ್ಧನಲ್ಲವೇ ಎಂಬುದರ ಕುರಿತು ದೇವರು ಕಾನೂನನ್ನು ರಚಿಸಿಲ್ಲ ಎಂದಿದ್ದಾರೆ.

ಇದೀಗ ನಟಿಯ ಹೇಳಿಕೆ ನಾನಾ ಸ್ವರೂಪ ಪಡೆದಿದ್ದು, ವಿವಾದದ ಕಿಡಿ ಎದ್ದಿದೆ.ಪರ-ವಿರೋಧ ನಿಲುವುಗಳು ವ್ಯಕ್ತವಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!