ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಬೋವಿಕ್ಕಾನ ಪರಿಸರದ ಇರಿಯಣ್ಣಿ ಪ್ರದೇಶದಲ್ಲಿ ಚಿರತೆಗಳ ಓಡಾಟ ಇರುವುದು ಖಚಿತಗೊಂಡಿದೆ.
ಇದಕ್ಕೆ ಸಾಕ್ಷಿಯಾಗಿ ಇಲ್ಲಿ ಅರಣ್ಯ ಇಲಾಖೆ ಸ್ಥಾಪಿಸಿರುವ ಸಿಸಿ ಕ್ಯಾಮರಾದಲ್ಲಿ ಚಿರತೆ ಓಡಾಟ ನಡೆಸುತ್ತಿರುವ ದೃಶ್ಯ ಸೆರೆಯಾಗಿದೆ.
ಇರಿಯಣ್ಣಿ ಪರಿಸರದ ಕುಣಿಯೇರಿಯಲ್ಲಿ ಚಿರತೆಯನ್ನು ಕಂಡಿರುವುದಾಗಿ ಕೆಲವರು ಹೇಳಿದ್ದು ಭಾರೀ ಸುದ್ದಿ ಮಾಡಿತ್ತು. ಇದರ ಬೆನ್ನಿಗೇ ಸ್ಥಳೀಯ ತೋಟದಲ್ಲಿ ಚಿರತೆ ಹೆಜ್ಜೆಗುರುತು ಕೂಡಾ ಕಾಣಿಸಿತ್ತು. ಈ ಹಿನ್ನಲೆಯಲ್ಲಿ ಅಲರ್ಟ್ ಆದ ಅರಣ್ಯ ಇಲಾಖೆ ಸಿಸಿ ಕ್ಯಾಮರ ಅಳವಡಿಸಿದ್ದು, ಚಿರತೆ ಓಡಾಟ ಇದರಲ್ಲಿ ದಾಖಲಾಗಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ