Friday, June 2, 2023

Latest Posts

SHOCKING | ಜೆಡಿಎಸ್ ಅಭ್ಯರ್ಥಿ ನಿವಾಸದ ಮೇಲೆ ಐಟಿ ದಾಳಿ

ಹೊಸದಿಗಂತ ವರದಿ ಚಿತ್ರದುರ್ಗ :

ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ರಘು ಆಚಾರ್ ನಿವಾಸದ ಮೇಲೆ ಸೋಮವಾರ ರಾತ್ರಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.   ಚಿತ್ರದುರ್ಗ ನಗರದ ಹೊರವಲಯದ ಬೆಂಗಳೂರು ಮಾರ್ಗದ ಎನ್.ಹೆಚ್. 4 ಬಳಿಯ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ.

ದಾಳಿ ಸಂದರ್ಭದಲ್ಲಿ ಮತದಾರರಿಗೆ ಹಂಚಲು ಪ್ಯಾಕ್ ಮಾಡಿ ಇಟ್ಟಿದ್ದ 50 ಲಕ್ಷ ರೂ.ಗಳು ಹಾಗೂ 8.83 ಲಕ್ಷ ಮೌಲ್ಯದ ಬಿಡಿಬಿಡಿ ನೋಟುಗಳು (Loose cash) ಸೇರಿದಂತೆ ಒಟ್ಟು 58,83,000 ರೂ. ನಗದು ಹಣ ವಶಪಡಿಸಿಕೊಳ್ಳಲಾಗಿದೆ. 239 ಲೀಟರ್  ನಷ್ಟು ಮದ್ಯದ ಬಾಟಲ್ ಗಳು ಹಾಗೂ 9 ಲೀಟರ್ ಐಎಂಎಲ್ ದೊರೆತಿದೆ.

ಐಟಿ ಅಧಿಕಾರಿಗಳು, ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದೇ ಸಂದರ್ಭದಲ್ಲಿ ಚುನಾವಣಾ ಅಕ್ರಮಕ್ಕೆ ಸಂಬಂದಿಸಿದಂತೆ ಚಿತ್ರದುರ್ಗದ  ಸಾದಿಕ್ ನಗರದಲ್ಲಿ 1,08,000 ರೂ.ಗಳು ಹಾಗೂ ಹೊಸದುರ್ಗದಲ್ಲಿ 4,25,500 ರೂ.ಗಳನ್ನು  ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!