ಪುಷ್ಪ ನಿರ್ಮಾಣ ಸಂಸ್ಥೆ ಮೇಲೆ ಐಟಿ ರೈಡ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಶ್ವದಲ್ಲೇ ಸದ್ದು ಮಾಡಿರುವ ಪುಷ್ಪ ಸಿನಿಮಾವನ್ನು ನೀಡಿರುವ ತೆಲುಗಿನ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಮೇಲೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ನವೀನ್ ಅರ್ನೇನಿ, ಚೆರುಕುರಿ, ಯಲಮಂಚಿಲಿ ರವಿಶಂಕರ್ ಹಾಗೂ ಅವರುಗಳ ಕಚೇರಿಗಳ ಮೇಲೆ ಸತತ ಹಲವು ಗಂಟೆಗಳ ಕಾಲ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಈ ಸಂಸ್ಥೆ ಪುಷ್ಪ ಅಲ್ಲದೇ ರಂಗಸ್ಥಳಂ, ಶ್ರೀಮಂತುಡು ಸೇರಿದಂತೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದು,ಇದೀಗಪುಷ್ಪಾ 2 ಸಿನಿಮಾ ಚಿತ್ರೀಕರಣದಲ್ಲಿ ತೊಡಗಿವೆ .
ಈಗಾಗಲೇ ಘೋಷಿಸಿರುವ ಚಿತ್ರಗಳ ಬಜೆಟ್ ಕೂಡ ಅಚ್ಚರಿ ಮೂಡಿಸುವಂತಿವೆ. ಈ ಕಾರಣದಿಂದಾಗಿಯೇ ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನಿರ್ಮಾಣ ಸಂಸ್ಥೆಯ ಪಾಲುದಾರರ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದ್ದಾರೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!