ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ಬೆಂಗಳೂರಿನ 15ಕ್ಕೂ ಹೆಚ್ಚು ಕಡೆ ಇಂದು ಬೆಳಗ್ಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಮುಖ ಉದ್ಯಮಿಗಳು, ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆ ಹಾಗೂ ಅಂಗಡಿ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಬೆಳ್ಳಂಬೆಳಗ್ಗೆ ಸುಖನಿದ್ದೆಯಲ್ಲಿ ಇದ್ದವರಿಗೆ ಶಾಕ್ ಆಗಿದೆ.
ಮುಳ್ಳೂರು, ಮಲ್ಲೇಶ್ವರಂ, ಡಾಲರ‍್ಸ್ ಕಾಲೋನಿ, ಬಿಇಎಲ್ ಸರ್ಕಲ್ ಇನ್ನಿತರ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ.