Monday, December 4, 2023

Latest Posts

ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯ ನೂತನ ವೆಬ್‌ಸೈಟ್ ಪ್ರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ನೂತನ ವೆಬ್ ಸೈಟ್ ಅನ್ನು ಪ್ರಾರಂಭಿಸಲಾಗಿದೆ. ಅ.11 ರಿಂದ ಅಧಿಕೃತವಾಗಿ ಸಾರ್ವಜನಿಕರು ಹಾಗೂ ಶಿಕ್ಷಣ ಇಲಾಖೆಯ ಅಧೀನ ಕಚೇರಿಗಳ ಬಳಕೆಗೆ ಇದು ಮುಕ್ತವಾಗಲಿದೆ.

ಈ ವೆಬ್‌ಸೈಟ್‌ ಅನ್ನು ಯೋಜನಾ ನಿರ್ದೇಶಕರು, ವೆಬ್ ಪೋರ್ಟಲ್ ವಿಭಾಗ, ಇ-ಆಡಳಿತ ಕೇಂದ್ರ, ಶಾಂತಿನಗರ ಬೆಂಗಳೂರು ಮಾರ್ಗದರ್ಶನ ಹಾಗೂ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಇನ್ನು ಮುಂದೆ https://schooleducation.karnataka.gov.in ವೆಬ್‌ಸೈಟ್‌ ಮೂಲಕವೇ ಮಾಹಿತಿ, ಆದೇಶ, ಸುತ್ತೋಲೆಗಳನ್ನು ಹೊರಡಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!