ತಮಿಳುನಾಡಿನಲ್ಲಿ ಐಟಿ ರೇಡ್:‌ ಡಿಎಂಕೆ ಸಚಿವರ ಮನೆಗಳಲ್ಲಿ ಶೋಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡಿನಾದ್ಯಂತ ಆದಾಯ ತೆರಿಗೆ ಇಲಾಖೆ ಶುಕ್ರವಾರ ಸುಮಾರು 40 ಸ್ಥಳಗಳಲ್ಲಿ ದಾಳಿ ನಡೆಸಿತು. ರಾಜ್ಯ ವಿದ್ಯುತ್ ಸಚಿವ ವಿ.ಸೆಂಥಿಲ್ ಬಾಲಾಜಿಗೆ ಸಂಬಂಧಿಸಿದ ಮನೆಗಳ ಮೇಲೆ ರೇಡ್‌ ನಡೆಯುತ್ತಿದೆ.

ಮೂಲಗಳ ಪ್ರಕಾರ, ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿರುವ ವಿವಿಧ ಸರ್ಕಾರಿ ಗುತ್ತಿಗೆದಾರರ ನಿವಾಸಗಳು ಮತ್ತು ಕಚೇರಿಗಳ ಮೇಲೆ ಸುಮಾರು 40 ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ.

ಬಾಲಾಜಿ ಕರೂರಿನ ಹಿರಿಯ ಡಿಎಂಕೆ ನಾಯಕನಾಗಿದ್ದು, ಪ್ರಸ್ತುತ ಚೆನ್ನೈ, ಕರೂರ್ ಸೇರಿದಂತೆ ಇತರೆಡೆ ದಾಳಿ ನಡೆಯುತ್ತಿದೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!