February 7, 2026
Saturday, February 7, 2026
spot_img

ಜೈಲಿನಲ್ಲಿದ್ದ ಬಾಯ್‌ಫ್ರೆಂಡ್ ಹುಟ್ಟುಹಬ್ಬ! ಅಲ್ಲಿಗೇ ಹೋಗಿ ರೀಲ್ಸ್‌ ಮಾಡಿದ ಯುವತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜೈಲಿನಲ್ಲಿರುವ ಬಾಯ್‌ಫ್ರೆಂಡ್‌ ಬರ್ಥ್‌ಡೇಗೆ ಅಲ್ಲಿಗೇ ಹೋಗಿ ಯುವತಿಯೊಬ್ಬಳು ರೀಲ್ಸ್‌ ಮಾಡಿದ್ದಾಳೆ.

ಈ ರೀಲ್ಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಜೈಲಿನ ಭದ್ರತೆ ಬಗ್ಗೆ ಪ್ರಶ್ನೆ ಎದ್ದಿದೆ.

ಛತ್ತೀಸ್‌ಗಢದ ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಜೈಲಿನಲ್ಲಿರುವ ಕೈದಿಗಳನ್ನು ಭೇಟಿ ಮಾಡಲು ಹೋಗುವಾಗ ಮೊಬೈಲ್‌ ತೆಗೆದುಕೊಂಡು ಹೋಗುವಂತಿಲ್ಲ. ಆದರೆ ಈ ಹುಡುಗಿ ಮೊಬೈಲ್‌ ಹೇಗೆ ತೆಗೆದುಕೊಂಡು ಹೋಗಿದ್ದಾಳೆ? ಅಷ್ಟೇ ಅಲ್ಲದೆ ರಾಜಾರೋಷವಾಗಿ ರೀಲ್ಸ್‌ ಮಾಡಿದ್ದಾಳೆ.

ವಿಡಿಯೋ ವ್ಲಾಗ್‌ ರೀತಿ ಇದ್ದು, ಇಂದು ನನ್ನ ಬಾಯ್‌ಫ್ರೆಂಡ್‌ ಜನ್ಮದಿನ. ಸೆಲೆಬ್ರೇಟ್‌ ಮಾಡೋದಕ್ಕೆ ಜೈಲಿಗೆ ಬಂದಿದ್ದೇನೆ. ಅವನು ಜೈಲಿನಲ್ಲಿರೋದು ನೋವಾಗ್ತಿದೆ. ನನ್ನನ್ನು ನೋಡಿ ಅವನು ಶಾಕ್‌ ಆಗ್ತಾನಾ ಸರ್ಪೈಸ್‌ ಆಗ್ತಾನಾ ನೋಡೋಣ ಬನ್ನಿ ಎಂದು ವಿಡಿಯೋದಲ್ಲಿ ಹೇಳಿದ್ದಾಳೆ.

ಸಂದರ್ಶಕ ಕೋಣೆಯೊಳಗೆ ತನ್ನ ಗೆಳೆಯನೊಂದಿಗೆ ಮಾತನಾಡುತ್ತಿದ್ದಾಗ ಈ ವೀಡಿಯೋ ಮಾಡಿದ್ದಾಳೆ. ನಂತರ ಅದನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಗೆ ಅಪ್‌ಲೋಡ್ ಮಾಡಿದ್ದಾಳೆ. ವೀಡಿಯೋದಲ್ಲಿ ಕಾಣುತ್ತಿರುವ ಕೈದಿಯನ್ನು ತಾರಕೇಶ್ವರ ಎಂದು ಗುರುತಿಸಲಾಗಿದ್ದು, ಪ್ರಸ್ತುತ ರಾಯ್‌ಪುರ ಕೇಂದ್ರ ಕಾರಾಗೃಹದಲ್ಲಿ ಮಾದಕ ದ್ರವ್ಯ ಮತ್ತು ಮನೋವಿಕೃತ ವಸ್ತುಗಳ (ಎನ್‌ಡಿಪಿಎಸ್) ಕಾಯ್ದೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ವೈರಲ್ ವೀಡಿಯೋದ ಬಗ್ಗೆ ಜೈಲು ಅಧಿಕಾರಿಗಳು ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !