June 29, 2026
Monday, June 29, 2026
spot_img

ದಿನಭವಿಷ್ಯ: ಈ ರಾಶಿಯವರಿಗಿಂದು ಹಿರಿಯರ ಮಾತೇ ವೇದವಾಕ್ಯವಾದರೆ ಒಳಿತು

ಮೇಷ
ನೀವು ನಿರೀಕ್ಷಿಸದ ಬದಲಾವಣೆ ಸಂಭವ. ಅದಕ್ಕೆ ಒಗ್ಗಿಕೊಳ್ಳಿ. ಹಿರಿಯರ ಕಿವಿಮಾತು ಪಾಲಿಸುವುದು ವಿಹಿತ. ವೃತ್ತಿ ಒತ್ತಡ ಹೆಚ್ಚು.  
ವೃಷಭ
ವ್ಯವಹಾರದಲ್ಲಿ  ಆಂಶಿಕ ಯಶಸ್ಸು. ಅಸೂಕ್ತ ಆಹಾರ ಸೇವನೆಯಿಂದ  ಗ್ಯಾಸ್ಟ್ರಿಕ್ ಸಮಸ್ಯೆ. ಪ್ರೀತಿಯ ವಿಚಾರದಲ್ಲಿ ಬಿಕ್ಕಟ್ಟು ಎದುರಿಸುವಿರಿ.
ಮಿಥುನ
ಉತ್ಸಾಹ ಹೆಚ್ಚಿಸುವ ಬೆಳವಣಿಗೆ. ಕಾಡುತ್ತಿದ್ದ ಸಮಸ್ಯೆಗೆ ಪರಿಹಾರ ಸಮೀಪಿಸಿದೆ. ಅದೃಷ್ಟ ಜತೆಗಿದೆ, ಪೂರಕ ಪ್ರಸಂಗ ಸೃಷ್ಟಿಯಾಗಲಿದೆ.  
ಕಟಕ
ನಿಮ್ಮನ್ನು ತುಳಿಯಲು ಕೆಲವರ ಯತ್ನ. ಆದರೆ ಅದು ಫಲ ನೀಡದು.  ಹಣದ ಕೊರತೆ ಸಂಭವ. ಸಾಲ ಪಡೆಯಲು ಹೋಗಬೇಡಿ.
ಸಿಂಹ
ಎಲ್ಲ ವಿಚಾರದಲ್ಲಿ ನಿಮಗೆ ಅನುಕೂಲಕರ. ಧನವೃದ್ಧಿ. ಕಾರ್ಯದಲ್ಲಿ ಯಶಸ್ಸು. ಪ್ರೀತಿ ಸ-ಲ. ಆರೋಗ್ಯ ಸಮಸ್ಯೆ ಪರಿಹಾರ. ನೆಮ್ಮದಿ.  
ಕನ್ಯಾ
ಎಂದಿಗಿಂತ ಹೆಚ್ಚು ಕಾರ್ಯದೊತ್ತಡ ಇದ್ದರೂ  ನಿಭಾಯಿಸಲು ಶಕ್ತ.  ಈಡೇರಿಸಲಾಗದ ಆಶ್ವಾಸನೆ ಯಾರಿಗೂ ಕೊಡಬೇಡಿ.  
ತುಲಾ
ನಿಮ್ಮ ಸಾಮರ್ಥ್ಯ ಅನಾವರಣಗೊಳ್ಳುವ ಸನ್ನಿವೇಶ. ಮನಸ್ಸಿಗೆ ಕಿರಿಕಿರಿ ತರುವ ಬೆಳವಣಿಗೆ. ವ್ಯವಹಾರದ ಒತ್ತಡ ಹೆಚ್ಚುವ ಸಾಧ್ಯತೆ.  
ವೃಶ್ಚಿಕ
ಎಲ್ಲ ವಿಧದಲ್ಲೂ ಇಂದು ಸವಾಲಿನ ದಿನ. ಮನಸ್ಸು ಶಾಂತಗೊಳಿಸುವ ಹವ್ಯಾಸದಲ್ಲಿ ತೊಡಗಿ. ಬಂಧುಗಳ ಸಮಸ್ಯೆ ನಿಮ್ಮ ಮೇಲೆ ಎಳೆದುಕೊಳ್ಳದಿರಿ.  
ಧನು
ಅದೃಷ್ಟ ನಿಮ್ಮ ಜತೆಗಿರದು. ಎಷ್ಟೇ ಪ್ರಯತ್ನ ಹಾಕಿದರೂ ಸೂಕ್ತ ಫಲ ದೊರಕದು. ಹಣ ಗಳಿಕೆಯ ವಿಚಾರದಲ್ಲೂ ಹಿನ್ನಡೆ ಕಾಣುವಿರಿ.    
ಮಕರ
ದಿನವಿಡೀ ಒತ್ತಡ. ಯಾವುದೇ ಕೆಲಸ ಮುಗಿಸಿದರೂ ಮತ್ತೊಂದು ಹೊಣೆ  ಹೆಗಲೇರುತ್ತದೆ.ಅಜೀರ್ಣ ಸಮಸ್ಯೆ ಕಾಡಬಹುದು.  
ಕುಂಭ
ಏನೋ ಕಳಕೊಂಡ ಭಾವ ಕಾಡುವುದು. ಭಾವುಕ ಸನ್ನಿವೇಶ ಎದುರಿಸುವಿರಿ. ದೈಹಿಕ ನೋವೂ ಕಾಡಲಿದೆ. ಧ್ಯಾನ, ಯೋಗ ಸಹಕಾರಿ.  
ಮೀನ
ಆತ್ಮೀಯರ ಹಿತಕ್ಕಾಗಿ ಇಂದು ಹೆಚ್ಚು ಗಮನ ಹರಿಸುವಿರಿ. ಕೆಲವು ಏರುಪೇರು ಎದುರಿಸುವ ಪ್ರಸಂಗ ಬಂದೀತು. ಮನೋದೃಢತೆಯಿರಲಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !