ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ಸ್ಯಾಂಡ್‌ವಿಚ್ ಕೊಡುವಾಗ ಕತ್ತರಿಸಿ ಕೊಡುವುದು ಕಾಮನ್. ಆದರೆ, ಈ ರೆಸ್ಟೋರೆಂಟ್‌ನಲ್ಲಿ ಸ್ಯಾಂಡ್‌ವಿಚ್ ಕತ್ತರಿಸಿ ಕೊಡಿ ಅಂದರೆ ಹಣ ಕೊಡಬೇಕಾಗುತ್ತೆ ಎಚ್ಚರ. ಇಟಲಿಯ ಜನಪ್ರಿಯ ಪ್ರವಾಸಿ ತಾಣವಾದ ಲೇಕ್ ಕೊಮೊ ಬಳಿ ಗೆರಾ ಲಾರಿಯೊ ಎಂಬಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಇಲ್ಲಿ ಬಾರ್ ಪೇಸ್ ಎಂಬ ರೆಸ್ಟೋರೆಂಟ್ ಇದ್ದು, ಅಲ್ಲಿಗೆ ಹೋದ ಗ್ರಾಹಕನೊಬ್ಬ ಸ್ಯಾಂಡ್‌ವಿಚ್ ಆರ್ಡರ್ ಮಾಡಿದ್ದಾರೆ. ಸರ್ವರ್ ಅದನ್ನು ಎರಡು ತುಂಡುಗಳಾಗಿ ಕತ್ತರಿಸಿ ಬಡಿಸಿದ್ದಾನೆ. ಸ್ಯಾಂಡ್‌ವಿಚ್ ಸವಿದ ಬಳಿಕ ಬಿಲ್ ನೋಡಿ ಗ್ರಾಹಕ ದಂಗಾಗಿದ್ದಂತೂ ಸುಳ್ಳಲ್ಲ.
ಪದಾರ್ಥದ ಅಸಲಿ ಬೆಲೆಗಿಂತ ಎರಡು ಯೂರೋ ಹೆಚ್ಚಾಗಿ ಬಿಲ್ ಮಾಡಿದ್ದಾರೆ. ಸ್ಯಾಂಡ್ವಿಚ್ ಅನ್ನು ಹಾಗೆಯೇ ತೆಗೆದುಕೊಂಡರೆ, ಚಾರ್ಜ್ 7.50 ಯುರೋಗಳು, ಕಟ್ ಮಾಡಿ ಕೊಟ್ಟರೆ 2 ಯೂರೋಗಳ ಹೆಚ್ಚುವರಿ ಪಾವತಿ ಮಾಡಬೇಕಂತೆ. ಭಾರತೀಯ ಕರೆನ್ಸಿಯಲ್ಲಿ ಒಂದು ಯುರೋ ರೂ.90. ಅಂದರೆ ಎರಡು ತುಂಡು ಮಾಡಲು 180 ರೂ.ಬಿಲ್ ಮಾಡಿದ್ದಾರೆ.
ಇದರಿಂದ ಆಘಾತಕ್ಕೊಳಗಾದ ಗ್ರಾಹಕ ಮಾಲೀಕ ಕ್ರಿಸ್ಟಿನಾ ಬೈಚಿ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮಾಲೀಕನ ಉತ್ತರ ಇನ್ನೂ ತಲೆತಿರುಗುವಂತೆ ಇತ್ತು. ನಿಮ್ಮ ಸೇವೆಗೆ ಅನುಗುಣವಾಗಿ ಚಾರ್ಜಸ್ ಇರುತ್ತದೆ. ಸ್ಯಾಂಡ್‌ವಿಚ್ ಕಟ್ ಮಾಡಿ ಕೊಟ್ಟರೆ ಎರಡು ಪ್ಲೇಟ್‌ಗಳಿಗೆ ಬದಲಾಯಿಸಬೇಕು. ಜೊತೆಗೆ ಕತ್ತರಿಸುವವನ ಶ್ರಮ, ತಿಂದ ಬಳಿಕ ಅದನ್ನು ತೊಳೆಯುವುದು ಇದೆಲ್ಲದರ ದರವನ್ನು ಬಿಲ್ ಮಾಡಲಾಗಿದೆ ಎಂದು ಉತ್ತರ ಕೊಟ್ಟಿದ್ದಾನೆ. ಅಷ್ಟೇ..ಗ್ರಾಹಕನ ಕತೆ ಮುಗೀತು ಸ್ಯಾಂಡ್‌ವಿಚ್ ಎರಡು ಭಾಗ ಮಾಡಿಸಿದ್ದಕ್ಕೆ ಬೇರೆ ದಾರಿಯಿಲ್ಲದೆ 180ರೂ ದುಪ್ಪಟ್ಟು ಹಣ ಕೊಟ್ಟು ವಾಪಸ್ ಬರಬೇಕಾಯಿತು.