ಗಣರಾಜ್ಯ ವಿಶೇಷ: ಹಿಮನೆತ್ತಿಯ ಮೇಲೆ ತ್ರಿವರ್ಣ ಪಟಪಟಿಸಿದ ಯೋಧರು

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಗಣರಾಜ್ಯೋತ್ಸವ ಎಂದರೆ ಅದು ಹಲವು ಆಯಾಮಗಳಲ್ಲಿ ಭಾರತದ ಮಿಲಿಟರಿ ಬಲದ ಪ್ರದರ್ಶನವೂ ಹೌದು.

ಇತ್ತ ರಾಜಪಥದಲ್ಲಿ ಹಲವು ಬಗೆಯ ಮಿಲಿಟರಿ ಕವಾಯತುಗಳಾಗುತ್ತಿದ್ದರೆ, ಅತ್ತ ಲಢಾಕಿನಲ್ಲಿ 15,000 ಅಡಿಗಳ ಎತ್ತರದಲ್ಲಿ, ಮೈನಸ್ 40 ಡಿಗ್ರಿಯ ಹಿಮಾಚ್ಛಾದಿತ ವಾತಾವರಣದಲ್ಲಿ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ ಇಂಡೊ ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆ ಯೋಧರು.

ಐಟಿಬಿಪಿ ತನ್ನ ಸಾಮಾಜಿಕ ಮಾಧ್ಯಮದ ಮೂಲಕ ಹಿಮಬೆಟ್ಟದ ನೆತ್ತಿಯಲ್ಲಿ ಯೋಧರು ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡುತ್ತಿರುವ ವಿಡಿಯೊ ತುಣುಕು ಪ್ರಸಾರ ಮಾಡಿದ್ದು, ಅದೀಗ ವೈರಲ್ ಆಗುತ್ತಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!