ನಾನು ಬದುಕುಳಿದಿದ್ದು ಒಂದು ಪವಾಡ: ಬಾಂಗ್ಲಾದ ಕರಾಳತೆ ಬಿಚ್ಚಿಟ್ಟ ಶೇಖ್‌ ಹಸೀನಾ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕಳೆದ ವರ್ಷ ಆಗಸ್ಟ್ 5 ರಂದು ಅಧಿಕಾರದಿಂದ ಕೆಳಗಿಳಿಯುವಂತೆ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದ ಬಳಿಕ ಮಾಜಿ ಪ್ರಧಾನಿ ಶೇಖ್‌ ಹಸೀನಾ ಬಾಂಗ್ಲಾದೇಶವನ್ನು ತೊರೆದಿದ್ದರು. ನಂತರ ಮಧ್ಯಂತರ ಸರ್ಕಾರ ರಚನೆ ಮಾಡಲಾಗಿದೆ.

ಇದೀಗ ಹಸೀನಾ ಶೇಖ್‌ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ನನ್ನನ್ನು ಹಾಗೂ ಸಹೋದರಿ ರೆಹಾನಾ ಅವರನ್ನು ಕೊಲ್ಲಲು ಸಂಚು ರೂಪಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಬಾಂಗ್ಲಾದೇಶ ಅವಾಮಿ ಲೀಗ್ ಪಕ್ಷವು ತನ್ನ ಫೇಸ್‌ಬುಕ್ ಪುಟದಲ್ಲಿ ಶುಕ್ರವಾರ ತಡರಾತ್ರಿ ಪೋಸ್ಟ್ ಮಾಡಿದ ಆಡಿಯೊದಲ್ಲಿ ಹಸೀನಾ ಈ ಆರೋಪಗಳನ್ನು ಮಾಡಿದ್ದಾರೆ.

ಪ್ರತಿಭಟನೆಯ ದಿನ ಪ್ರತಿಭಟನಾಕಾರರು ಶೇಖ್‌ ಹಸೀನಾ ಅವರ ಮನೆಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಈ ಬಗ್ಗೆ ಮಾತನಾಡಿದ ಹಸೀನಾ, ರೆಹಾನಾ ಮತ್ತು ನಾನು ಬದುಕುಳಿದಿದ್ದು ಒಂದು ಪವಾಡವಾಗಿದೆ. ಕೇವಲ 20-25 ನಿಮಿಷಗಳ ಅಂತರದಲ್ಲಿ, ನಾವು ಸಾವಿನಿಂದ ಪಾರಾಗಿದ್ದೇವೆ ಎಂದು ಹೇಳಿದ್ದಾರೆ. ಹಲವು ಬಾರಿ ನನ್ನ ಮೇಲೆ ಕೊಲೆ ಪ್ರಯತ್ನ ನಡೆದಿತ್ತು ಎಂಬ ಸ್ಪೋಟಕ ವಿಷಯವನ್ನು ಬಹಿರಂಗಗೊಳಿಸಿದ್ದಾರೆ.

ಆಗಸ್ಟ್ 21 ರಂದು ನಡೆದ ಘಟನೆಯಲ್ಲಿ ಬದುಕಿರುವುದು ಹಾಗೂ ಅಥವಾ ಕೋಟಲಿಪಾರಾದಲ್ಲಿ ನಡೆದ ಬೃಹತ್ ಕೋಟ್ಲಿಪಾರಾ ಬಾಂಬ್‌ ದಾಳಿಯಿಂದ ಬದುಕುಳಿಯುವುದು, ಹಾಗೂ ಕೆಲ ಘಟನೆಗಳಿಂದ ನಾನು ಸುರಕ್ಷಿತವಾಗಿರುವುದು ಅಲ್ಲಾನ ದಯೆ ಎಂದು ಅವರು ಹೇಳಿದ್ದಾರೆ. ನಾನು ಬೇರೆ ಏನಾದರೂ ಮಾಡಬೇಕೆಂದು ಅಲ್ಲಾ ಬಯಸುತ್ತಾನೆ. ಆದರೆ, ನಾನು ಈಗ ಸಂತ್ರಸ್ತೆ. ನನ್ನ ದೇಶ ಮತ್ತು ನನ್ನ ಮನೆ ಇಲ್ಲದೆ ಬದುಕುತ್ತಿದ್ದೇನೆ. ನನ್ನದೆನ್ನುವ ಎಲ್ಲವನ್ನೂ ಸುಟ್ಟುಹಾಕಲಾಗಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ, ಆಗಸ್ಟ್ 2024 ರಲ್ಲಿ, ಶೇಖ್ ಹಸೀನಾ ಮತ್ತು ಅವಾಮಿ ಲೀಗ್ ಪಕ್ಷದ ಸರ್ಕಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಪ್ರಬಲ ಚಳುವಳಿ ನಡೆದಿತ್ತು. ಹಲವಾರು ವಾರಗಳ ಪ್ರತಿಭಟನೆಗಳು, ಹಿಂಸಾಚಾರ ಪ್ರೇರಿತ ಘರ್ಷಣೆಗಳು ಮತ್ತು ಚಳುವಳಿಗಳ ನಂತರ, ಆಗಸ್ಟ್ 5, 2024 ರಂದು ಬಾಂಗ್ಲಾದೇಶದಲ್ಲಿ ದಂಗೆಯನ್ನು ನಡೆಸಲಾಯಿತು, ನಂತರ 76 ವರ್ಷದ ಶೇಖ್ ಹಸೀನಾ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶದಿಂದಲೇ ಪಲಾಯನ ಮಾಡಿ ಭಾರತಕ್ಕೆ ಬರಬೇಕಾಯಿತು. ಈ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದಲ್ಲಿ 600ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!