VIRAL PHOTO | 40 ವರ್ಷವಾಯ್ತು! ಈ ಬಾಬಾ ಎತ್ತಿದ ಕೈ ಇನ್ನೂ ಇಳಿಸಿಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಲ್ಲೊಬ್ರು ಬಾಬಾ ಇದ್ದಾರೆ, ಇವರು ಸಾಮಾನ್ಯವಾದವರಲ್ಲ. 40 ವರ್ಷದಿಂದ ಒಂದೇ ರೀತಿ ಇದ್ದಾರೆ. ಇವರನ್ನು ನೋಡಿಕೊಂಡು ಹೋಗೋದಕ್ಕೆ ಭಕ್ತಾಧಿಗಳು ಮುಗಿಬೀಳುತ್ತಾರೆ.

ಕೈ ಕೆಳಗಿಳಿಸಿಲ್ಲ
ಅಮರ್ ಭಾರತಿ ಬಾಬಾ 40 ವರ್ಷಗಳಿಂದ ಒಂದು ಕೈಯನ್ನು ಎತ್ತುಕೊಂಡೇ ಇದ್ದಾರೆ. ಆ ಕೈಯನ್ನು ಕೆಳಗೆ ಇಳಿಸಿಯೇ ಇಲ್ಲ, ಕೈಯನ್ನು ಬಳಸದೇ ಕೈ ತೆಳ್ಳಗಾಗಿದೆ. ಗಾಳಿಯಲ್ಲಿ ಕೈ ಇರುವ ಕಾರಣ ಕೈಗಳು ಸಡಿಲವಾಗಿ ರಕ್ತ ಸಂಚಾರವೇ ಇಲ್ಲದಂತಾಗಿದೆ.

ಹೀಗೆ ಮಾಡಿದ್ದು ಯಾಕೆ?
ಬಾಬಾಗೆ ಯಾರ ಶಾಪವೂ ಇಲ್ಲ, ಅಥವಾ ವರಕ್ಕಾಗಿ ಈ ಕಠಿಣ ನಿರ್ಧಾರ ತೆಗೆದುಕೊಂಡೂ ಇಲ್ಲ. ಇದು ಸ್ವಇಚ್ಛೆಯಿಂದ ಬಾಬಾ ತೆಗೆದುಕೊಂಡಿರುವ ನಿರ್ಧಾರ. ಜಗತ್ತಿನಲ್ಲಿ ಸೌಹಾರ್ದತೆಯನ್ನು ಕಾಪಾಡಲು ಈ ನಿರ್ಧಾರ ಕೈಗೊಂಡಿದ್ದಾರೆ. ಬಾಬಾ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ರೀತಿ ಮಾಡುವುದಕ್ಕೂ ಮನಸ್ಸು ಮುಖ್ಯ ಎಂದು ಹೇಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!