ಶಕ್ತಿ ಯೋಜನೆ ಶುರುವಾಗಿ ವರ್ಷವೇ ಆಗೋಯ್ತು, ಎಷ್ಟು ಜನ ʼಪ್ರಯೋಜನʼ ಪಡೆದಿದ್ದಾರೆ ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಾಳೆಗೆ ಸರಿಯಾಗಿ ಒಂದು ವರ್ಷದ ಹಿಂದೆ, ಬಹುಕೋಟಿ ಮಹಿಳೆಯರ ಪುಟ್ಟ ಕನಸೊಂದು ನನಸಾಗಿತ್ತು. ಪ್ರಣಾಳಿಕೆಯಲ್ಲಿ ಹೇಳಿದಂತೆ ಸಿಎಂ ಸಿದ್ದರಾಮಯ್ಯ ಮಹಿಳೆಯರಿಗಾಗಿ ಉಚಿತ ಪ್ರಯಾಣ ಅವಕಾಶ ಮಾಡಿಕೊಟ್ಟಿದ್ದರು, ಮಹಿಳೆಯರು ಲಗೇಜ್‌ ಹೊತ್ತು ಧೈರ್ಯವಾಗಿ ಬಸ್‌ ಹತ್ತಿದ್ದರು..

ಈ ಅವಧಿಯಲ್ಲಿ 225 ಕೋಟಿ ಮಹಿಳೆಯರು ಉಚಿತವಾಗಿ ನಾಲ್ಕು ನಿಗಮದ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಇದರಿಂದ ನಾಲ್ಕು ನಿಗಮಕ್ಕೆ ಬರೋಬ್ಬರಿ 5481 ಕೋಟಿ ರೂಪಾಯಿ ಆದಾಯ ಬಂದಿದೆ. ಕೆಎಸ್ಆರ್​ಟಿಸಿ ಒಂದರಲ್ಲೇ 68 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದರೆ, ಬಿಎಂಟಿಸಿಯಲ್ಲಿ 71 ಕೋಟಿ, ಕೆಕೆಆರ್​ಟಿಸಿ- ಎನ್​ಡಬ್ಲ್ಯುಕೆಆರ್​ಟಿಸಿಯಲ್ಲಿ 85 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದಾರೆ. ಇದರಿಂದ ನಾಲ್ಕು ನಿಗಮಗಳಿಗೆ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಆರ್ಥಿಕವಾಗಿ ನಷ್ಟದಲ್ಲಿದ್ದ ನಿಗಮಕ್ಕೆ ಶಕ್ತಿ ಯೋಜನೆಯಿಂದ ದೊಡ್ಡ ಮಟ್ಟದಲ್ಲಿ ಲಾಭವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!