ಚಂದ್ರನಲ್ಲಿ ಇರುಳು ಕಳೆದು ಬೆಳಗಾಗುತ್ತಿದೆ, ಸ್ಲೀಪ್‌ಮೋಡ್‌ನಿಂದ ಎಚ್ಚರವಾಗಲಿರೋ ಪ್ರಗ್ಯಾನ್, ವಿಕ್ರಮ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಂದ್ರನಲ್ಲಿ ಇರುಳಾದಂತೆ ಸ್ಲೀಪ್ ಮೋಡ್‌ಗೆ ಜಾರಿದ್ದ ಪ್ರಗ್ಯಾನ್ ಹಾಗೂ ವಿಕ್ರಮ್ ಇದೀಗ ಮತ್ತೆ ಎಚ್ಚರವಾಗುವ ಸಮಯ ಬಂದಿದೆ.

ಹೌದು, ಚಂದ್ರನಲ್ಲಿ ಇರುಳು ಕಳೆದು ಇದೀಗ ಬೆಳಗಾಗುತ್ತಿದ್ದು, ಮತ್ತೊಮ್ಮೆ ಲ್ಯಾಂಡರ್ ಹಾಗೂ ರೋವರ್ ಎಚ್ಚರಗೊಳ್ಳುವ ನಿರೀಕ್ಷೆ ಇದೆ.

ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಚಂದ್ರಯಾನ-೨ ಇತಿಹಾಸ ಸೃಷ್ಟಿಸಿದೆ. ೧೪ ದಿನಗಳ ನಂತರ ಲ್ಯಾಂಡರ್ ವಿಕ್ರಮ್ ಹಾಗೂ ರೋವರ್ ಪ್ರಗ್ಯಾನ್ ಸ್ಲೀಪ್ ಮೋಡ್‌ಗೆ ಜಾರಿತ್ತು.

ಇದೀಗ ಶಿವಶಕ್ತಿ ಪಾಯಿಂಟ್‌ನಲ್ಲಿರುವ ರೋವರ್ ಹಾಗೂ ಲ್ಯಾಂಡರ್ ಎಚ್ಚರವಾಗಲಿದೆ. ತಮ್ಮ ಸೌರಫಲಕಗಳ ಮೇಲೆ ಸೂರ್ಯನ ಬೆಳಕು ಬಿದ್ದ ನಂತರ ಕೆಲಸ ಆರಂಭಿಸಲಿವೆ.

ಸೆ.೨೨ರಂದು ಅಂತಿಮವಾಗಿ ಬೆಳಕು ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ತಲುಪುತ್ತದೆ. ಚಂದ್ರಯಾನ-೩ ಜೊತೆಗಿನ ಸಂಪರ್ಕವನ್ನು ಮರುಸ್ಥಾಪಿಸಲು ಇಸ್ರೋ ವಿಜ್ಞಾನಿಗಳು ಸಿದ್ಧತೆ ನಡೆಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!