VIRAL | ಒಬ್ಳು ಸಿಗೋದೇ ಕಷ್ಟ! ಎಲ್ಲರ ಒಪ್ಪಿಗೆ ಪಡೆದು ಇಬ್ಬರು ಗರ್ಲ್‌ಫ್ರೆಂಡ್ಸ್‌ ಜೊತೆ ಮದುವೆಯಾದ ಹಳ್ಳಿ ಹೈದ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಈಗಿನ ಕಾಲದಲ್ಲಿ ಒಂದು ಗಂಡಿಗೆ ಒಂದು ಹೆಣ್ಣು ಸಿಗೋದೇ ಕಷ್ಟವಾಗಿದೆ. ಅಂಥದ್ರಲ್ಲಿ ಯುವಕನೊಬ್ಬ ತಾನು ಪ್ರೀತಿಸಿದ ಇಬ್ಬರು ಯುವತಿಯರನ್ನು ಮದುವೆ ಆಗಿದ್ದಾನೆ.

ತೆಲಂಗಾಣದ ಲಿಂಗಾಪುರ ತಾಲೂಕಿನ ಘುಮನೂರು ಗ್ರಾಮದ ಯುವಕ ಸೂರ್ಯದೇವ್​ ಕುಟುಂಬ ಮತ್ತು ಸ್ಥಳೀಯ ಸಮುದಾಯದ ಸಂಪೂರ್ಣ ಬೆಂಬಲದೊಂದಿಗೆ ಇಬ್ಬರು ಯುವತಿಯರಿಗೆ ಮಾಂಗಲ್ಯಧಾರಣೆ ಮಾಡಿದ್ದಾನೆ.

TELANGANA  YOUNG MAN MARRIED TWO WOMEN  TRIBAL CEREMONY  TRIANGLE LOVE STORYಮೂಲಗಳ ಪ್ರಕಾರ, ಸೂರ್ಯದೇವ್​​ ಅಕ್ಕಪಕ್ಕದ ಗ್ರಾಮಗಳ ಇಬ್ಬರು ಯುವತಿಯರಾದ ಲಾಲ್‌ದೇವಿ ಮತ್ತು ಜಲಕರ್‌ದೇವಿ ಎಂಬುವರನ್ನು ಪ್ರೀತಿಸುತ್ತಿದ್ದ. ಈ ವಿಚಾರ ತಿಳಿದ ಗಿರಿಜನ ಸಮುದಾಯದ ಹಿರಿಯರು ಹಾಗೂ ಗ್ರಾಮಸ್ಥರು ಮಧ್ಯಪ್ರವೇಶಿಸಿ ಇಬ್ಬರೂ ಮಹಿಳೆಯರ ಕುಟುಂಬದವರೊಂದಿಗೆ ಮಾತುಕತೆ ನಡೆಸಿದರು.

ಪರಸ್ಪರ ಒಪ್ಪಂದದ ನಂತರ, ಈ ಮೂವರ ಮದುವೆಯ ಮೂಲಕ ತಮ್ಮ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಲು ನಿರ್ಧರಿಸಿದರು. ಹಾಗೇ, ತಮ್ಮ ಹಿರಿಯರ ಆಶೀರ್ವಾದದೊಂದಿಗೆ ಮದುವೆಯ ಆಮಂತ್ರಣ ಪತ್ರಿಕೆಗಳನ್ನು ಮುದ್ರಿಸಿ ಸಾಂಪ್ರದಾಯಿಕ ಬುಡಕಟ್ಟು ಪದ್ಧತಿಯಂತೆ ಗುರುವಾರ ವಿವಾಹ ನೆರವೇರಿಸಲಾಯಿತು. ನವದಂಪತಿಗಳು ಸೌಹಾರ್ದಯುತವಾಗಿ ಒಟ್ಟಿಗೆ ಬಾಳುವುದಾಗಿ ಪರಸ್ಪರ ಒಪ್ಪಿಕೊಂಡು ಹಸೆಮಣೆ ಏರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!