April 11, 2026
Saturday, April 11, 2026
spot_img

ಫೆಬ್ರವರಿಯಲ್ಲೇ ಫುಲ್ ಬಿಸಿ ಬಿಸಿ: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ ತಾಪಮಾನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇನ್ನೂ ಮಾರ್ಚ್ ಬಂದಿಲ್ಲ, ನಗರದಲ್ಲಿ ಬೇಸಿಗೆ ಈಗಾಗಲೇ ತನ್ನ ಆರ್ಭಟ ತೋರಿಸುತ್ತಿದೆ. ಫೆಬ್ರವರಿಯಲ್ಲೇ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ದಾಟಿ, ನಾಗರಿಕರನ್ನು ಬೆಚ್ಚಿಬೀಳಿಸಿದೆ. ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಹೆಚ್ಚುತ್ತಿದ್ದು, ಮಧ್ಯಾಹ್ನ ಸಮಯದಲ್ಲಿ ಹೊರಗೆ ಸಂಚಾರ ಕಷ್ಟಕರವಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಾಹಿತಿಯಂತೆ, ಬೆಂಗಳೂರಿನಲ್ಲಿ ಫೆಬ್ರವರಿ 21ರಿಂದ ತಾಪಮಾನದಲ್ಲಿ ಏರಿಕೆ ಸ್ಪಷ್ಟವಾಗಿದೆ. 21ರಂದು 30.8°C ದಾಖಲಾಗಿದ್ದರೆ, 22ರಂದು 32.4°C, 23ರಂದು 32.8°C, 24ರಂದು 31.1°C ಮತ್ತು 25ರಂದು 31.6°C ದಾಖಲಾಗಿದೆ. ಮಾರ್ಚ್ ಪ್ರಾರಂಭಕ್ಕೂ ಮುನ್ನವೇ ಉಷ್ಣಾಂಶ ಹೆಚ್ಚಾಗಿರುವುದು ವಿಶೇಷ.

ಇದನ್ನೂ ಓದಿ:

ಹಿಂದಿನ ವರ್ಷಗಳಲ್ಲೂ ಫೆಬ್ರವರಿಯಲ್ಲಿ ಹೆಚ್ಚಿನ ತಾಪಮಾನ ದಾಖಲಾಗಿದ್ದರೂ, ಈ ಬಾರಿ ಏರಿಕೆಯ ವೇಗ ಗಮನ ಸೆಳೆಯುತ್ತಿದೆ. 2005ರಲ್ಲಿ ಫೆಬ್ರವರಿಯಲ್ಲಿ 35.9°C ದಾಖಲಾಗಿದ್ದುದನ್ನು ಹವಾಮಾನ ಇಲಾಖೆ ಉಲ್ಲೇಖಿಸಿದೆ.

ಬಿಸಿಲಿನ ತೀವ್ರತೆ ಹೆಚ್ಚುತ್ತಿರುವ ಹಿನ್ನೆಲೆ ವೈದ್ಯರು ಮುನ್ನೆಚ್ಚರಿಕೆ ಸೂಚಿಸಿದ್ದಾರೆ. ಮಧ್ಯಾಹ್ನ 12ರಿಂದ 3ರ ನಡುವೆ ಅನಾವಶ್ಯಕವಾಗಿ ಹೊರಗೆ ಹೋಗಬಾರದು, ಸಾಕಷ್ಟು ನೀರು ಕುಡಿಯಬೇಕು ಹಾಗೂ ಹಗುರವಾದ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದ್ದಾರೆ.

ಮಾರ್ಚ್‌ನಲ್ಲಿ ಇನ್ನಷ್ಟು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಇರುವುದರಿಂದ, ನಗರವಾಸಿಗಳು ಈಗಿನಿಂದಲೇ ಜಾಗ್ರತೆ ವಹಿಸುವುದು ಒಳಿತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !