March 18, 2026
Wednesday, March 18, 2026
spot_img

ಬಾಲಿವುಡ್‌ಗೆ ಲಗಾಮು ಹಾಕುವ ಟೈಮ್‌ ಬಂದಿದೆ, ಈ ರೀತಿ ಬರೆಯೋಕೆ ನಾಚಿಕೆ ಆಗ್ಬೇಕು: ಕೆಡಿ ಹಾಡಿಗೆ ಕಂಗನಾ ಗರಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರೇಮ್‌ ನಿರ್ದೇಶನದ ಕೆಡಿ ಸಿನಿಮಾದ ಸರ್ಸೆ ಸೆರಗ ಸರ್ಸೆ ಹಾಡಿಗೆ ವ್ಯಾಪಕ ವಿರೋಧವಾಗಿದೆ. ಅದರಲ್ಲಿಯೂ ಹಿಂದಿಯ ವರ್ಷನ್‌ ಲಿರಿಕ್ಸ್‌ ಬಗ್ಗೆ ಜನ ಕೀಳುಮಟ್ಟದ್ದು ಎನ್ನುತ್ತಿದ್ದಾರೆ.

ಇದೀಗ ನಟಿ ಕಂಗನಾ ರಣಾವತ್‌ ಈ ಹಾಡಿನ ಬಗ್ಗೆ ಮಾತನಾಡಿ, ಅಸಹ್ಯವಾಗಿದೆ ಎಂದಿದ್ದಾರೆ. ಇಂಥ ಹಾಡುಗಳ ಬಗ್ಗೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳುವ ಅಗತ್ಯ ಇದೆ. ಬಾಲಿವುಡ್ ಅಶ್ಲೀಲತೆ, ಗಿಮಿಕ್ ಮತ್ತು ಅಟೆನ್ಷನ್ ಪಡೆಯುವ ತಂತ್ರಗಳಲ್ಲಿ ಎಲ್ಲ ಮಿತಿಗಳನ್ನು ಮೀರಿದೆ. ಇಡೀ ದೇಶವೇ ಇವರನ್ನು ಖಂಡಿಸುತ್ತಿದೆ. ಆದರೆ ಇವರಿಗೆ ಯಾವುದೇ ನಾಚಿಕೆ ಇಲ್ಲ ಎಂದು ನನಗನ್ನಿಸುತ್ತದೆ. ಇಂತಹ ಅಸಭ್ಯ ಪ್ರದರ್ಶನಗಳ ಬಗ್ಗೆ ಸರ್ಕಾರ ಮತ್ತು ಸೆನ್ಸಾರ್ ಮಂಡಳಿಗಳು ಕಠಿಣ ಕ್ರಮ ಕೈಗೊಳ್ಳುವ ಅಗತ್ಯವಿದೆ. ಬಾಲಿವುಡ್‌ಗೆ ಸರಿಯಾದ ಲಗಾಮು ಹಾಕುವ ಸಮಯ ಬಂದಿದೆ ಎಂದು ಗುಡುಗಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !