ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾರ್ಡರ್-ಗವಾಸ್ಕರ್ ಟ್ರೋಫಿ ಸೋತ ಟೀಮ್ ಇಂಡಿಯಾ ಬೇಸರದಲ್ಲಿದ್ದು, ಇದರ ನಡುವೆ ವಿದಾಯದ ಹೇಳುವುದು ನಾಯಕ ರೋಹಿತ್, ವಿರಾಟ್ ಕೊಹ್ಲಿಗೆ ಬಿಟ್ಟದ್ದು ಎಂದು ಮುಖ್ಯ ಕೋಚ್ ಗೌತಮ್ ಗಂಭೀರ್ ಹೇಳಿದ್ದಾರೆ.
5ನೇ ಟೆಸ್ಟ್ ಸೋತ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕೋಚ್ ಗೌತಮ್ ಗಂಭೀರ್, ಯಾವುದೇ ಆಟಗಾರರ ಭವಿಷ್ಯ ಕುರಿತು ನಾನು ಮಾತನಾಡುವುದಿಲ್ಲ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರು ಕ್ರಿಕೆಟ್ಗೆ ವಿದಾಯ ಹೇಳುವುದು ಅವರವರಿಗೆ ಬಿಟ್ಟದ್ದು. ಹಿರಿಯ ಆಟಗಾರರು ಬದ್ಧತೆ ಹಾಗೂ ಶಿಸ್ತು ಹೊಂದಿದ್ದಾರೆ. ಅವರು ಇನ್ನಷ್ಟು ಬಲಯುತವಾಗಿ ತಂಡವನ್ನು ಮುಂದಕ್ಕೆ ತೆಗೆದುಕೊಂಡು ಹೋಗಬಹುದು ಎಂದು ನಾನು ನಿರೀಕ್ಷಿಸಿದ್ದೇನೆ ಎಂದು ಹೇಳಿದ್ದಾರೆ.
ಡ್ರೆಸಿಂಗ್ ರೂಮ್ನಲ್ಲಿ ಎಲ್ಲ ಹಿರಿಯ ಹಾಗೂ ಕಿರಿಯ ಆಟಗಾರರ ಜೊತೆ ಪ್ರಾಮಾಣಿಕ ಹಾಗೂ ನ್ಯಾಯಯುತವಾಗಿ ಇರಲು ಬಯಸುತ್ತೇನೆ. ಯಾವಾಗಲೂ ಡ್ರೆಸಿಂಗ್ ರೂಮ್ ಅನ್ನು ಸಂತಸದಿಂದ ಇಡಬೇಕು ಎಂದುಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ತಂಡದಲ್ಲಿ ಬದಲಾವಣೆಗಳು ಆಗಬಹುದು. ರೋಹಿತ್, ವಿರಾಟ್ ಕೊಹ್ಲಿ ಫ್ಲಾಪ್ ಆಗುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ತವರಿನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ನಲ್ಲೂ ಇಬ್ಬರು ವೈಫಲ್ಯ ಅನುಭವಿಸಿದ್ದಾರೆ. ಈಗ ಆಸ್ಟ್ರೇಲಿಯಾ ವಿರುದ್ಧವೂ ಯಾವುದೇ ಉತ್ತಮ ಪ್ರದರ್ಶನ ನೀಡಿಲ್ಲ. ಇದು ಹೀಗೆ ಮುಂದುವರೆದರೆ ಅವರು ತಂಡದಲ್ಲಿ ಇರಲು ಅರ್ಹರು ಅಲ್ಲ ಎಂದು ಕಠಿಣವಾಗಿ ಹೇಳಿದ್ದಾರೆ.
ಸಿಡ್ನಿ ಟೆಸ್ಟ್ನಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ ಅವರು ಮಾತನಾಡಿದಂತೆ ತಾವು ಸದ್ಯಕ್ಕೆ ಯಾವುದೇ ನಿವೃತ್ತಿಯ ಬಗ್ಗೆ ಯೋಚನೆ ಮಾಡಿಲ್ಲ ಎಂದು ಈಗಾಗಲೇ ಹೇಳಿದ್ದಾರೆ.