September 30, 2026
Wednesday, September 30, 2026
spot_img

ಯಾವ ರೀತಿ ಬಟ್ಟೆ ಹಾಕಬೇಕು ಅನ್ನೋದು ಅವರಿಷ್ಟ! ಬಾಲಿವುಡ್‌ ನಟಿ ಕ್ರಿತಿ ಸೆನೊನ್‌ಗೆ ಸಾಥ್‌ ಕೊಟ್ಟ ರಾಹುಲ್‌ ಗಾಂಧಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಹೆಣ್ಣುಮಕ್ಕಳಿಗೆ ಯಾವ ರೀತಿ ಬಟ್ಟೆ ಹಾಕಿಕೊಳ್ಳಬೇಕು ಎನ್ನುವ ಜ್ಞಾನ ಇರುತ್ತದೆ. ಅವರವರ ಬಟ್ಟೆ ಅವರವರ ಇಷ್ಟ ಎಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಬಾಲಿವುಡ್‌ ನಟಿ ಕ್ರಿತಿ ಸೆನೊನ್‌ ರಾಖಿ ಹಬ್ಬದ ಪ್ರಯುಕ್ತ ಜ್ಯುವೆಲ್ಲರಿ ಬ್ರಾಂಡ್‌ ನೀಡಿರುವ ಜಾಹೀರಾತಿನಲ್ಲಿ ಭಾಗಿಯಾಗಿದ್ದರು. ಈ ವೇಳೆ ಬ್ರಾಲೆಟ್‌ನಂತರ ಟಾಪ್‌ ಹಾಕಿ ಅಣ್ಣನಿಗೆ ರಾಖಿ ಕಟ್ಟಿದ್ದರು. ಈ ಜಾಹೀರಾತಿಗೆ ಎಲ್ಲೆಡೆ ವಿರೋಧ ವ್ಯಕ್ತವಾಗಿತ್ತು.

ಮಹಿಳೆಯರು ಹೀಗೇ ಇರಬೇಕು, ಇಂಥ ಬಟ್ಟೆಯೇ ಹಾಕಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸ್ತೇವೆ? ಮಹಿಳೆಯರಿಗೆ ಬಟ್ಟೆಗಳ ಬಗ್ಗೆ ಹೆಚ್ಚು ಆಸಕ್ತಿ ಇದೆ ಹಾಗೆ ಜ್ಞಾನವೂ ಇದೆ. ಎಲ್ಲಿಗಾದರೂ ಹೋಗುವಾಗ ಮಹಿಳೆ ಯಾವುದೇ ಬಟ್ಟೆಯನ್ನು ಸೆಲೆಕ್ಟ್‌ ಮಾಡಿದ್ದರೂ ಅದರ ಬಗ್ಗೆ ನೂರು ಬಾರಿ ಯೋಚಿಸಿಯೇ ಹಾಕಿಕೊಂಡಿರುತ್ತಾಳೆ. ಹೀಗಾಗಿ ಮಹಿಳೆಯರ ಬಟ್ಟೆಗಳ ಬಗ್ಗೆ ಕಮೆಂಟ್‌ ಮಾಡೋದನ್ನು ಬಿಟ್ಟು ಉಪಯೋಗಕ್ಕೆ ಬರುವ ಕೆಲಸಗಳನ್ನು ಮಾಡಿ. ಮಹಿಳೆಯ ಸಂಸ್ಕೃತಿ ಮತ್ತು ಗೌರವವನ್ನು ಕೇವಲ ಅವಳ ಬಟ್ಟೆಯಿಂದಲೇ ಅಳಿಯುವ ಕೆಟ್ಟ ಮನಸ್ಥಿತಿ ನಮ್ಮ ಸಮಾಜದಲ್ಲಿದೆ. ಆದರೆ ನಿಜವಾದ ಸಂಸ್ಕೃತಿ ಮತ್ತು ಸಂಪ್ರದಾಯ ಇರುವುದು ಕೇವಲ ಬಟ್ಟೆಯಲಲ್ಲ, ಬದಲಿಗೆ ಅವಳ ಹೃದಯದಲ್ಲಿ ಮತ್ತು ಆಚಾರ-ವಿಚಾರಗಳಲ್ಲಿ ಎಂದು ರಾಗಾ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?

ಪ್ರತಿಷ್ಠಿತ ಜ್ಯುವೆಲ್ಲರಿ ಬ್ರ್ಯಾಂಡ್‌ ಜೀವಾ ಕಡೆಯಿಂದ ರಕ್ಷಾಬಂಧನದ ಜಾಹೀರಾತು ಅಪ್‌ಲೋಡ್‌ ಆಗಿತ್ತು. ಇದರಲ್ಲಿ ನಟಿ ಕೃತಿ ಸೆನೊನ್‌ ಬಿಕಿಯಂತಹ ಟಾಪ್‌ ಧರಿಸಿದ್ದರು. ತಮ್ಮ ಸಹೋದರನಿಗೆ ಹಾಗೂ ಮನೆಯ ನಾಯಿಗೆ ಅವರು ರಾಖಿ ಕಟ್ಟಿದ್ದರು. ಈ ಜಾಹೀರಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಯಾವ ತಂಗಿ ಅಣ್ಣನಿಗೆ ರಾಖಿ ಕಟ್ಟುವಾಗ ಇಂತಹ ಬಟ್ಟೆ ಹಾಕೋತಾಳೆ ಎಂದು ನೆಟ್ಟಿಗರು ಕಮೆಂಟ್‌ ಮಾಡಿದ್ದರು.

ಕಂಗನಾ ರಣಾವತ್‌ Vs ಕೃತಿ ಸೆನೊನ್‌ ವಾರ್‌

ನಟಿ ಕಂಗನಾ ರಣಾವತ್‌ ಕೂಡ ಈ ಬಗ್ಗೆ ಕಮೆಂಟ್‌ ಮಾಡಿದ್ದು, ಹೆಣ್ಣುಮಕ್ಕಳಿಗೆ ಹಾಕಿಕೊಳ್ಳೋಕೆ ನೂರಾರು ರೀತಿಯ ಬಟ್ಟೆಗಳಿವೆ. ಆದರೆ ರಾಖಿ ಜಾಹೀರಾತಿಗೆ ಇಂತಹ ಬಟ್ಟೆ ಹಾಕುವ ಅವಶ್ಯಕತೆ ಇತ್ತೇ? ಬೇಕಂತ ಜನರನ್ನು ಸೆಳೆಯಲು ಇಂತಹ ಬಟ್ಟೆಗಳನ್ನು ಹಾಕಲಾಗಿದೆ ಎಂದು ನಟಿ ಹೇಳಿದ್ದರು. ಇದಕ್ಕೆ ಕ್ರಿತಿ ಸೆನೊನ್‌ ಕೂಡ ಕೌಂಟರ್‌ ಕೊಟ್ಟಿದ್ದು, ರಾಖಿ ಹಾಗೂ ಅದರ ಎಮೋಷನ್ಸ್‌ ಬಟ್ಟೆಯಲ್ಲಿಲ್ಲ. ಮನುಷ್ಯರನ್ನು ಹಾಗೂ ಭಾವನೆಗಳನ್ನು ಬಟ್ಟೆಯ ಮೂಲಕ ಅಳೆಯುವುದನ್ನು ನಿಲ್ಲಿಸಿ ಎಂದು ಹೇಳಿದ್ದರು.

Must Read