Thursday, August 11, 2022

Latest Posts

ಟ್ರಂಪ್‌ ಕುಟುಂಬಕ್ಕೆ ಆಘಾತ: ಟ್ರಂಪ್ ವಿಚ್ಛೇದಿತ ಪತ್ನಿ, ಉದ್ಯಮಿ ಇವಾನಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿಚ್ಛೇದಿತ ಪತ್ನಿ, ಉದ್ಯಮಿ  73ವರ್ಷದ ಇವಾನಾ ಟ್ರಂಪ್ ವಿಧಿವಶರಾಗಿದ್ದಾರೆ.

ಉದ್ಯಮಿಯಾಗಿದ್ದ ಇವಾನಾ
ನ್ಯೂಯಾರ್ಕ್‌ನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ. ಇನ್ನೊಂದು ಮೂಲಗಳ‌ ಮಾಹಿತಿ ಪ್ರಕಾರ ತಮ್ಮ ನಿವಾಸದಲ್ಲಿ ಅವರು ಮೆಟ್ಟಿನಿಂದ ಜಾರಿ ಬಿದ್ದು ಸಾವನ್ನಪ್ಪಿದ್ದಾರೆ. ಡೊನಾಲ್ಡ್ ಜೂನಿಯರ್, ಇವಾಂಕಾ, ಎರಿಕ್ ಎಂಬ ಮೂವರು ಮಕ್ಕಳನ್ನು ಬಿಟ್ಟು ಇವಾನಾ ಅಗಲಿದ್ದಾರೆ

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಟ್ರಂಪ್, ಇವಾನಾ ಅವರು ಉತ್ತಮ ಮತ್ತು ಸ್ಪೂರ್ತಿದಾಯಕ ಜೀವನವನ್ನು ನಡೆಸಿದರು‌ ಎಂದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಪುತ್ರಿ ಇವಾಂಕಾ ನನ್ನ ತಾಯಿಯ ಅಗಲಿಕೆಯಿಂದ ನನಗೆ ಹೃದಯಾಘಾತವಾದಂತಾಗಿದೆ. ನಾನು ಅವಳನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇನೆ ಆದರೆ, ಅವಳ ನೆನಪು ನಮ್ಮ ಹೃದಯದಲ್ಲಿ ಯಾವಾಗಲೂ ಜೀವಂತವಾಗಿರುತ್ತದೆ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇವಾನಾ ಮಾಡೆಲ್‌ ಕದಷೇತ್ರದಲ್ಲಿಯೂ ಮಿಂಚಿದ್ದು, 1977ರಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ವಿವಾಹವಾಗಿ ಬಳಿಕ 1992ರಲ್ಲಿ ವಿಚ್ಛೇದನ ಪಡೆದಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss