ಜ. ತಿಮ್ಮಯ್ಯ ಸ್ಮಾರಕ ಭವನಕ್ಕೆ ಜನರಲ್ ವಿ.ಪಿ.ಮಲ್ಲಿಕ್ ಭೇಟಿ

ಹೊಸದಿಗಂತ ವರದಿ,ಮಡಿಕೇರಿ:

ಭಾರತೀಯ ಸೇನೆಯ ಮಾಜಿ ಮುಖ್ಯಸ್ಥ ಕಾರ್ಗಿಲ್ ಸಮರದ ನೇತೃತ್ವ ವಹಿಸಿದ್ದ ಜನರಲ್ ವೇದ್ ಪ್ರಕಾಶ್ ಮಲ್ಲಿಕ್ ಪಿವಿಎಸ್’ಎಂ, ಎವಿಎಸ್‍ಎಂ ಅವರು ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಬುಧವಾರ ಭೇಟಿ ವೀಕ್ಷಿಸಿದರು.
ಪತ್ನಿ ಡಾ.ಅಂಜನಾ ಮಲ್ಲಿಕ್ ಅವರೊಂದಿಗೆ ಭೇಟಿ ನೀಡಿದ ವಿ.ಪಿ.ಮಲ್ಲಿಕ್ ಅವರು ಸ್ಮಾರಕ ಭವನ ವೀಕ್ಷಿಸಿ ಇಲ್ಲಿನ ವ್ಯವಸ್ಥಿತ ಸಂಗ್ರಹದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಜನರಲ್ ತಿಮ್ಮಯ್ಯ ಅವರ ಸೇನಾ ಜೀವನ ಪ್ರತೀಯೊಬ್ಬ ಭಾರತೀಯನಿಗೂ ಆದರ್ಶಪ್ರಾಯ ಎಂದು ಮಲ್ಲಿಕ್ ಹೇಳಿದರು.
ತಿಮ್ಮಯ್ಯ ಸ್ಮಾರಕ ಭವನದ ವ್ಯವಸ್ಥಾಪಕ ಗೌಡಂಡ ಸುಬೇದಾರ್ ಮೇಜರ್ ತಿಮ್ಮಯ್ಯ, ನಾಯಕ್ ಸುಬೇದಾರ್ ಮೋಹನ್ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!