Thursday, February 9, 2023

Latest Posts

ಸಿಲಿಕಾನ್ ಸಿಟಿ ಹಿಟ್ ಅಂಡ್ ರನ್ ಕೇಸ್: ಆರೋಪಿಗೆ ನ್ಯಾಯಾಂಗ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಂಗಳವಾರ ಸಿಲಿಕಾನ್ ಸಿಟಿಯ ವಿಜಯನಗರ (Vijayanagar) ದ ಹೊಸಹಳ್ಳಿ (Hosahalli) ಯಲ್ಲಿ ಸ್ಕೂಟರ್ ಹಿಂದೆ ವೃದ್ಧನನ್ನು ಎಳೆದುಕೊಂಡು ಹೋಗಿದ್ದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ದ್ವಿಚಕ್ರ ವಾಹನ ಸವಾರ ಶಾಹಿಲ್, ಬೊಲೆರೋ (Bolero) ಟಚ್ ಮಾಡಿದ್ದಲ್ಲದೆ ಮುತ್ತಪ್ಪಗೆ ಕಾಲಲ್ಲಿ ಒದ್ದು ಎಸ್ಕೇಪ್ ಆಗ್ತಿದ್ದನು .

ಈ ವೇಳೆ ಆತನನ್ನು ಬಿಡಬಾರದು ಅಂತಾ ಗಾಡಿ ಹಿಡಿದಿದ್ದ ಮುತ್ತಪ್ಪರನ್ನ ಶಾಹಿಲ್ ಅರ್ಧ ಕೀ.ಮಿಗೂ ಹೆಚ್ಚು ಧರಧರನೇ ಎಳೆದೊಯ್ದಿದ್ದನು.
ಘಟನೆ ಸಂಬಂಧ ವಿಜಯನಗರ ಸಂಚಾರಿ ಪೊಲೀಸ್ ಠಾಣೆ (Vijayanagar Traffic Police) ಹಾಗೂ ಗೋವಿಂದರಾಜನಗರ ಪೊಲೀಸ್ ಠಾಣೆ (Govindarajanagar Police Station) ಯಲ್ಲಿ ಎಫ್‍ಐ ಆರ್ ದಾಖಲಾಗಿದೆ.

ಶಾಹಿಲ್ ನನ್ನ ಇಂದು ಗೋವಿಂದರಾಜನಗರ ಪೊಲೀಸರು 34 ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇದೀಗ ಆರೋಪಿಯನ್ನು 14 ದಿನಗಳ ಕಾಲ ಜನವರಿ 31 ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!