ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿ:
ಎಳೆಯ ಹಲಸಿನ ಕಾಯಿಯ ಹೋಳುಗಳು
ಈರುಳ್ಳಿ
ನೆನೆಸಿದ ಕಾಬೂಲ್ ಕಡಲೆ ಒಂದು ಲೋಟ
ತೆಂಗಿನ ಕಾಯಿ ತುರಿ
ಮಸಾಲೆ ಪದಾರ್ಥಗಳು
ಮಾಡುವ ವಿಧಾನ:
ಎಳೆಯ ಹಲಸಿನ ಕಾಯಿಯ ಸಣ್ಣ ಹೋಳುಗಳನ್ನು ಪಾತ್ರೆಯಲ್ಲಿ ಹಾಕಿ ಸಾಕಷ್ಟು ನೀರು ಹಾಕಿ ಬೇಯಲು ಇಡಿ. ಅರ್ಧ ಬೆಂದ ನಂತರ ಹೆಚ್ಚಿದ ಈರುಳ್ಳಿ ಸೇರಿಸಿ ಮತ್ತೆ ಬೇಯಿಸಿ. ಕಾಬೂಲ್ ಕಡಲೆಯನ್ನು ಪ್ರತ್ಯೇಕವಾಗಿ ಬೇಯಿಸಿಟ್ಟುಕೊಳ್ಳಿ.
ಒಂದು ಬಾಣಲೆಯಲ್ಲಿ ನಾಲ್ಕು ಮೆಣಸಿನ ಕಾಯಿ, ಚಿಟಿಗೆ ಜೀರಿಗೆ, ಒಂದು ಟೀ ಸ್ಪೂನ್ ಉದ್ದಿನ ಬೇಳೆ, ಒಂದು ಟೀ ಸ್ಪೂನ್ ಕೊತ್ತಂಬರಿ, ಇಂಗು, ಹುಣಸೆ ಹುಳಿ ಹಾಗೂ ಕರಿಬೇವಿನ ಸೊಪ್ಪನ್ನು ಹಾಕಿ ಚೆನ್ನಾಗಿ ಹುರಿಯಿರಿ. ತೆಂಗಿನ ತುರಿಯನ್ನು ಈ ಮಸಾಲೆಯೊಂದಿಗೆ ಸೇರಿಸಿ ನುಣ್ಣಗೆ ರುಬ್ಬಿ. ಬೆಂದ ಕಡಲೆಯನ್ನು ಹಲಸಿನ ಹೋಳುಗಳಿಗೆ ಸೇರಿಸಿ, ರುಚಿಗೆ ಬೇಕಾದಷ್ಟು ಉಪ್ಪು, ಚಿಟಕಿ ಅರಶಿನ, ಚಿಟಿಕೆ ಮೆಣಸಿನ ಪುಡಿ ಸೇರಿಸಿ ಒಂದು ಕುದಿ ಬರಿಸಿ. ಚೆನ್ನಾಗಿ ಕುದಿ ಬಂದ ನಂತರ ರುಬ್ಬಿದ ಮಸಾಲೆ ಸೇರಿಸಿ. ಬೆಳ್ಳುಳ್ಳಿ ಒಗ್ಗರಣೆ ನೀಡಿ. ಗುಜ್ಜೆ ಕಡ್ಲೆ ಗಸಿ ರೆಡಿ.