ಮುಸುಕು ಧರಿಸಿ ಆ ಥಿಯೇಟರ್‌ನಲ್ಲಿ ಸಿನಿಮಾ ನೋಡ್ತಾರಂತೆ ಬನ್ನಿ..!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೆಸರಾಂತ ಸಿನಿಮಾ ನಾಯಕ-ನಾಯಕಿಯರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ಬಹಳ ಕಡಿಮೆ. ಅಭಿಮಾನಿಗಳನ್ನು ನಿಯಂತ್ರಿಸುವುದು ಬಹಳ ಕಷ್ದದ ಕೆಲಸ ಹಾಗಾಗಿಯೇ ಸಿನಿ ತಾರೆಯರು ಜನರಿಂದ ತುಸು ದೂರ ಇರುತ್ತಾರೆ. ಒಂದು ವೇಳೆ ಅವರು ಬಂದರೂ ಮುಸುಕು ಧರಿಸಿ ಅಥವಾ ಟೈಟ್‌ ಸೆಕ್ಯೂರಿಟಿಯ ಮಧ್ಯೆ ಇರುತ್ತಾರೆ. ಕೆಲವೊಮ್ಮೆ ಸಾಮಾನ್ಯರಂತೆ ಇರಲು ಅನೇಕ ವೇಷಗಳಲ್ಲಿ ನಾಯಕ-ನಾಯಕಿಯರು ಆಚೆ ಬರುವುದು ಕಾಮನ್.‌

ಇತ್ತೀಚೆಗಷ್ಟೇ ನಾಯಕಿ ಸಾಯಿ ಪಲ್ಲವಿ ಹೈದರಾಬಾದಿನ ಥಿಯೇಟರ್ ಗೆ ಮಾರುವೇಷದಲ್ಲಿ ಹೋಗಿ ಸಿನಿಮಾ ನೋಡಿದ ಸುದ್ದಿಯಾಗಿತ್ತು. ಅದೇ ರೀತಿ ಇದೀಗ ಅಲ್ಲು ಅರ್ಜುನ್ ಕೂಡ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡ್ತಾರೆ ಅಂತ ಅವರ ತಂದೆ ಅಲ್ಲು ಅರವಿಂದ್ ಹೇಳಿದ್ದಾರೆ.

ಇತ್ತೀಚೆಗಷ್ಟೇ ನಡೆದ ಪಕ್ಕಾ ಕಮರ್ಷಿಯಲ್ ಸಿನಿಮಾ ಪ್ರೆಸ್ ಮೀಟ್ ನಲ್ಲಿ ಬನ್ನಿ ಬಗ್ಗೆ ಮಾತನಾಡಿದ ಅಲ್ಲು ಅರವಿಂದ್ ”ಬನ್ನಿ ಎರಡು ವಾರ ವಿದೇಶಕ್ಕೆ ಹೋಗಿ ನಿನ್ನೆ ಮನೆಗೆ ಬಂದಿದ್ದರು. ಮನೆಯಲ್ಲಿ ಕ್ಯೂಬ್ ಆನ್ ಮಾಡಲು ಹೋದಾಗ ಥಿಯೇಟರ್‌ಗೆ ಹೋಗಿ ಎಫ್ 3 ಸಿನಿಮಾ ನೋಡುವಂತೆ ಹೇಳಿದೆ. ನಿನ್ನೆ ರಾತ್ರಿ ಎಫ್3 ಸಿನಿಮಾ ನೋಡಲು ಕೂಕಟ್‌ಪಲ್ಲಿಯ ಥಿಯೇಟರ್‌ಗೆ ಹೋಗಿದ್ದಾನೆ. ಪ್ರತಿ ಬಾರಿಯೂ ಬನ್ನಿ ಸಿನಿಮಾಗೆ ಹೋಗಲು ಅಲ್ಲಿಗೆ ಹೋಗುತ್ತಾನೆ. ಸಿನಿಮಾ ಶುರುವಾದಾಗ ಮಾಸ್ಕ್ ಹಾಕಿಕೊಂಡು ಒಳಗೆ ಹೋಗುತ್ತಾನೆ. ಇಂಟರ್ವಲ್ ನಲ್ಲಿ ಸ್ವಲ್ಪ ಮುಂಚೆಯೇ ಹೊರಗೆ ಬಂದು ಮತ್ತೆ ಒಳಗೆ ಹೋಗಿ ಇಡೀ ಸಿನಿಮಾ ನೋಡಿ ಮತ್ತೆ ಮುಸುಕು ಹಾಕಿಕೊಂಡು ಹೊರಗೆ ಬರುತ್ತಾರೆ. ಪ್ರತಿ ಬಾರಿ ಚಲನಚಿತ್ರಗಳನ್ನು ವೀಕ್ಷಿಸಲು ಕೂಕಟ್‌ಪಲ್ಲಿ ಥಿಯೇಟರ್‌ಗೇ ಹೋಗುತ್ತಾನೆ ಎಂದರು. ಇದೀಗ ಬನ್ನಿ ಅಭಿಮಾನಿಗಳು ಈ ಬಾರಿ ಕೂಕಟ್‌ಪಲ್ಲಿ ಥಿಯೇಟರ್‌ಗಳಿಗೆ ಹೋದರೆ ಚೆನ್ನಾಗಿ ಪರಿಶೀಲನೆ ಮಾಡುತ್ತೇವೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!